ರಟ್ಟಿಹಳ್ಳಿ:ಗಂಡುಮಕ್ಕಳಿಗೆ 21ವರ್ಷಮತ್ತು ಹೆಣ್ಣು ಮಕ್ಕಳಿಗೆ 18ವರ್ಷಪೂರೈಸಿದ ಬಳಿಕ ಕಾನೂನಿನಲ್ಲಿವಿವಾಹಕ್ಕೆ ಮಾನ್ಯತೆ ಇದೆ.ಕಾನೂನುಉಲ್ಲಂಸಿ ಬಾಲ್ಯ ವಿವಾಹ (child marriage) ಮಾಡಿದರೆತಂದೆ-ತಾಯಿಗಳಿಗೆ,ಅಡುಗೆಭಟ್ಟರಿಗೆ,ಶಾಮಿಯಾನದವಿಗೆ,ಪುರೋಹಿತರಿಗೆ,ಅಮಂತ್ರಣಪತ್ರಿಕೆ ತಯಾರಕರಿಗೆ ಹಾಗೂಮದುವೆಗೆ ಪ್ರೋತ್ಸಾಹ ನೀಡಿದವರಿಗೆದಂಡ ಮತ್ತು ಜೈಲು ಶಿಕ್ಷೆವಿಧಿಸಲಾಗುತ್ತದೆ ಎಂದು ಹಾವೇರಿಜಿಲ್ಲಾ ಮಕ್ಕಳ ರಕ್ಷಣಾ ಸಮಾಜಕಾರ್ಯಕರ್ತೆ ಶ್ವೇತಾ ಸಕ್ರಿಹಳ್ಳಿಹೇಳಿದರು.
ತಾಲೂಕಿನಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿಆಯೋಜಿಸಿದ್ದ ಮಕ್ಕಳ ಹಕ್ಕುಗಳರಕ್ಷಣೆ,ಬಾಲ್ಯವಿವಾಹ ನಿಷೇಧ,ಬಾಲಕಾರ್ಮಿಕ ನಿಷೇದ ಕಾಯ್ದೆ,ಪೋಕ್ಸೋಕಾಯ್ದೆ ಕುರಿತ ಅರಿವು ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.‘ಚಿಕ್ಕವಯಸ್ಸಿನಲ್ಲಿ ವಿವಾಹವಾದರೆಕುಟುಂಬದ ಜವಾಬ್ದಾರಿಯಿಂದ ಒತ್ತಡನಿರ್ಮಾಣವಾಗುತ್ತದೆ.ಗರ್ಭಪಾತದಂತಹಸಮಸ್ಯೆಗಳು ಕಂಡುಬರುತ್ತವೆ.ಹೀಗಾಗಿಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನುಪಾಲಿಸಬೇಕು.ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಪಾಲಕರುಆದ್ಯತೆ ನೀಡಬೇಕು.ಮಕ್ಕಳುಯಾವುದೇ ಸಮಸ್ಯೆಗಳು ಕಂಡುಬಂದರೂ1098ಸಹಾಯವಾಣಿಗೆಕರೆ ಮಾಡಬೇಕು’ ಎಂದರು.
ಮುಖ್ಯಶಿಕ್ಷಕ ಎಂ.ಕೆ.ಹೊಳಜೋಗಿಮಾತನಾಡಿ,ಶಾಲಾಸಮಯದಲ್ಲಿ ವಿದ್ಯಾರ್ಥಿಗಳನ್ನುಬೇಕರಿ,ಗ್ಯಾರೇಜ್,ಇಟ್ಟಿಗೆಬಟ್ಟಿ,ಕಾರ್ಖಾನೆ,ಹೋಟೆಲ್ಸೇರಿದಂತೆ ಇತರೆಡೆ ಕೆಲಸಕ್ಕೆಬಳಸಿಕೊಳ್ಳಬಾರದು.6 ರಿಂದ14ವರ್ಷದಮಕ್ಕಳಿಗೆ ಉಚಿತ ಮತ್ತು ಕಡ್ಡಾಯಶಿಕ್ಷಣ ಜಾರಿಯಲ್ಲಿದ್ದು ಪಾಲಕರುಮಕ್ಕಳನ್ನು ಪ್ರತಿದಿನ ಶಾಲೆಗೆಕಳುಹಿಸಬೇಕು ಎಂದರು.
ಶಿಕ್ಷಕರಾದಎನ್.ಎನ್.ಗುಮ್ಮನಾಳ,ಕವಿತಾಎಂ.ಆರ್,ಹರ್ಷಿತಉಜನೀಪುರ ಇತರರಿದ್ದರು.