ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ವಿವಿಧ ಮಠಾಧೀಶರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ. ವಿಜಯೇಂದ್ರ ಆಹ್ವಾನ ನೀಡಿ ಮಾತನಾಡಿದರು. ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ, ಮಹೇಶ ಕಮಡೊಳ್ಳಿ ಇತರರಿದ್ದರು.
ಹಾನಗಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಾಲೂಕಿನ ಅಕ್ಕಿಆಲೂರಿನ ಮುತ್ತಿನಕಂತಿಮಠದಲ್ಲಿ 30ಕ್ಕೂ ಅಧಿಕ ಮಠಾಧೀಶರನ್ನು ಭೇಟಿ ಮಾಡಿ ರೈತ ನಾಯಕ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವಕ್ಕೆ ಆಗಮಿಸಲು ಆಹ್ವಾನ ನೀಡಿದರು.
ಬಳಿಕ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಮಠಾಧೀಶರಿಗೆ ಆಹ್ವಾನ ನೀಡಲಾಗುತ್ತಿದೆ. ಲಕ್ಷೋಪೊಕ್ಷ ಅಭಿಮಾನಿ ಕಾರ್ಯಕರ್ತರು, ದೇಶಾದ್ಯಂತ ಸಾವಿರಕ್ಕೂ ಅಧಿಕ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪೂಜ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸುದೀರ್ಘ ರಾಜಕೀಯ ಜೀವನದಲ್ಲಿ ರಾಜ್ಯ-ದೇಶದ ಹಿತಕ್ಕೆ ಸಮರ್ಪಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಶೀರ್ವದಿಸಬೇಕು. ರಾಜ್ಯದ ರೈತ ಹೋರಾಟಗಾರರು, ಮಠ-ಮಾನ್ಯಗಳ ಬಗ್ಗೆ ಅತ್ಯಂತ ಗೌರವ ಹೊಂದಿದವರು ಆಗಿರುವ ಯಡಿಯೂರಪ್ಪ ಅವರು ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಇದು ಇಡೀ ಅಭಿಮಾನಿಗಳ ಅಭಿಮಾನದ ಉತ್ಸವವಾಗಿದೆ’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನ, ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಮುಖಂಡರಾದ ರಾಜಶೇಖರ ಕಟ್ಟೇಗೌಡರ, ರಾಜಣ್ಣ ಗೌಳಿ, ಮಾಲತೇಶ ಸೊಪ್ಪಿನ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಕೃಷ್ಣ ಈಳಿಗೇರ, ಶಿವಕುಮಾರ ದೇಶಮುಖ, ಭೋಜರಾಜ ಕರೂದಿ, ಉದಯ ವಿರುಪಣ್ಣನವರ, ಸಚಿನ ರಾಮಣ್ಣನವರ, ವಿಶ್ವನಾಥ ಭಿಕ್ಷವರ್ತಿಮಠ, ಶಿವಯೋಗಿ ಪಾಟೀಲ ಇತರರು ಇದ್ದರು.