ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶ್ರೀ ವೀರಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕೋತ್ಸವ ನಿಮಿತ್ತ ಧರ್ಮಸಭೆ (religion) ಜರುಗಿತು.  
ಹಾವೇರಿ

religion ಭಾರತ ಭಕ್ತಿ, ಸಂಸ್ಕೃತಿ, ಧರ್ಮದಿಂದ ಶ್ರೀಮಂತ ರಾಷ್ಟ್ರ

ರಟ್ಟಿಹಳ್ಳಿ: ಭಾರತ ದೇಶವು ಭಕ್ತಿ, ಸಂಸ್ಕೃತಿ, ಧರ್ಮದಿಂದ religion ಅತ್ಯಂತ ಶ್ರೀಮಂತ ಮತ್ತು ಮಾದರಿ ರಾಷ್ಟ್ರವಾಗಿದೆ ಎಂದು ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ಧ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶ್ರೀ ವೀರಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕೋತ್ಸವ ನಿಮಿತ್ತ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿದರು.
ಸದ್ಯ ಒತ್ತಡದ ಜೀವನದಲ್ಲಿ ಸಂಸ್ಕಾರ, ಧಾರ್ಮಿಕತೆ, ಪರಂಪರೆ ಮರೆಯುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಎಲ್ಲ ಸಂಸ್ಕಾರಗಳು ಮತ್ತು ಉತ್ತಮ ಮೌಲ್ಯಗಳು ಉಳಿಯಬೇಕು. ಪ್ರತಿವರ್ಷವೂ ಇಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುತ್ತಿದ್ದು, ಇದು ಹೀಗೆ ಮುಂದುವರಿಯಲಿ ಹಾರೈಸಿದರು.
25-30 ವರ್ಷಗಳಿಂದ ತಾಲೂಕಿನ ಗಡಿ ಗ್ರಾಮವಾಗಿರುವ ಬತ್ತಿಕೊಪ್ಪ ಗ್ರಾಮದಲ್ಲಿ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ಸಾಮೂಹಿಕ ವಿವಾಹ ಸೇರಿದಂತೆ ವೈವಿಧ್ಯಮಯವಾದ ಕಲ್ಯಾಣ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದರು.
ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೊಟ್ರಯ್ಯ ಶಾಸ್ತ್ರಿಮಠ ವೈದಿಕತ್ವ ನೆರವೇರಿಸಿದರು.
ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಪರಮೇಶ್ವರಪ್ಪ ಹಲಗೇರಿ, ಗ್ರಾಪಂ ಸದಸ್ಯರಾದ ತಿಪ್ಪೇಶ ಶಿವಪ್ಪನವರ, ಹನುಮಂತಪ್ಪ ನಾಗೇನಹಳ್ಳಿ, ಮಹೇಶ ಬಣಕಾರ, ಗಣೇಶ ಹಾದ್ರಿಹಳ್ಳಿ, ಹನುಮಂತಪ್ಪ ಹಡಗದ, ರಮೇಶ ಹಡಗದ, ಉಪಸ್ಥಿತರಿದ್ದರು. ರಮೇಶ ಶಿವಣ್ಣನವರ, ಗಿರೀಶ ದುರ್ಗದ ನಿರ್ವಹಿಸಿದರು.