ರಟ್ಟಿಹಳ್ಳಿ ಪಟ್ಟಣದಲ್ಲಿ ಬಿಜೆಪಿ ಘಟಕದಿಂದ 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಜರುಗಿತು. ದೇವರಾಜ ನಾಗಣ್ಣನವರ, ಆರ್.ಎನ್. ಗಂಗೋಳ, ಸುಶೀಲ ನಾಡಗೇರ, ಹನುಮಂತಪ್ಪ ಗಾಜೇರ ಇತರರು ಇದ್ದರು. 
ಹಾವೇರಿ

ತ್ಯಾಗ, ಬಲಿದಾನದ ಪ್ರತಿಫಲವೇ ಸ್ವಾತಂತ್ರ್ಯ: independence

ಮಂಜುನಾಥ ಗದಗಿನ

ರಟ್ಟಿಹಳ್ಳಿ: ಮಹಾತ್ಮ ಗಾಂಧೀಜಿ, ಸುಭಾಷ ಚಂದ್ರಬೋಸ್, ಭಗತ್‌ಸಿಂಗ್, ಕಿತ್ತೂರು ರಾಣೆ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ಅನೇಕರ ತ್ಯಾಗ ಬಲಿದಾನದ ಹೋರಾಟದ ಪ್ರತಿಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಘಟಕದಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿಯೂ ದೇಶಾಭಿಮಾನ ಇರಬೇಕು. ಗಡಿಯನ್ನು ಕಾಯುವ ಸೈನಿಕರಿಂದ ನಮ್ಮ ರಾಷ್ಟ್ರ ಸುಭದ್ರವಾಗಿದೆ. ಸೈನಿಕರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.
ಮಾಜಿ ಸೈನಿಕ ಅಶೋಕ ದ್ಯಾವಕ್ಕಳವರ ಮತ್ತು ಸಮಾಜ ಸೇವಕ ವೀರಪ್ಪ ಹೆಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ವೇಳೆ ನಡೆದ ಬೈಕ್ ರ‌್ಯಾಲಿ ಎಲ್ಲರ ಗಮನ ಸೆಳೆಯಿತು.
ತಾಲೂಕು ಪ್ರಧಾನ ಕಾರ್ಯದರ್ಶಿ ಸುಶೀಲ ನಾಡಗೇರ, ಆರ್.ಎನ್. ಗಂಗೋಳ, ಶಂಭಣ್ಣ ಗೂಳಪ್ಪನವರ, ಹನುಮಂತಪ್ಪ ಗಾಜೇರ, ಪ.ಪಂ.ಸದಸ್ಯರಾದ ಬಸವರಾಜ ಆಡಿನವರ, ರವಿ ಹದಡೇರ, ಬಸವರಾಜ ಕಟ್ಟೀಮನಿ, ಶ್ರೀದೇವಿ ಶ್ರೀನಿವಾಸ ಭೈರೋಜಿ, ರೇಣುಕಾ ಅಗಡಿ, ಲಕ್ಷ್ಮೀ ತೋಟಗಂಟಿ, ಸರೋಜ ಹುರಕಡ್ಲಿ, ಮಾನಸಾ ಮಳಗೊಂಡರ, ಪ್ರಶಾಂತ ದ್ಯಾವಕ್ಕಳವರ, ನಾಗರಾಜ ಹಿರೇಮಠ, ರವಿ ಮುದ್ದಣ್ಣನವರ, ವಿಜಯ ಮಡಿವಾಳರ, ಹರೀಶ ಮಾಳಗೇರ, ಪ್ರಕಾಶ ಕೊರವರ, ರಾಜು ಬಟ್ಲಕಟ್ಟಿ, ವೀರನಗೌಡ ಯಡಚಿ, ಮಾಲತೇಶ ಬೆಳಕೇರಿ, ಗಿರೀಶ ಮಾಸೂರು ಇತರರು ಇದ್ದರು.