ಬ್ಯಾಡಗಿ: ಕಡ್ಡಿ ಹಾಗೂ ಡಬ್ಬಿ ತಳಿಯ ಮೆಣಸಿನಕಾಯಿ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಈ ವಾರದಿಂದ ಮಾರುಕಟ್ಟೆಗೆ ಹೊಸ ಮೆಣಸಿನಕಾಯಿ ಆವಕ ಏರಿಕೆಯಾಗಿದೆ.
ದಸರಾ, ಶೀಗೆ ಹುಣ್ಣಿಮೆ ಹಬ್ಬಗಳು ಮುಗಿಯುತ್ತಿದ್ದಂತೆ, ಮಂಗಳವಾರ 14,410 ಚೀಲ ಆವಕವಾಗಿ ವಹಿವಾಟು ಏರಿಕೆಯಾಗಿದೆ. ಪರಿಣಾಮ ವರ್ತಕರು, ದಲ್ಲಾಳಿ ಅಂಗಡಿಕಾರರು, ಹಮಾಲರಲ್ಲಿ ಉತ್ಸಾಹ ಇಮ್ಮಡಿಸಿದೆ.
ಎರಡು ವರ್ಷಗಳಿಂದ ಒಣ ಮೆಣಸಿನಕಾಯಿ ಬೆಲೆ ಏರಿಕೆಯಾಗುತ್ತಲಿದೆ. ಕಳೆದ ತಿಂಗಳು ಡಬ್ಬಿ, ಕಡ್ಡಿ ತಳಿ ದರ ಕ್ವಿಂಟಾಲ್ಗೆ 80 ಸಾವಿರ ರೂ. ತಲುಪಿತ್ತು. ಕ್ವಿಂಟಾಲ್ಗೆ ಸರಾಸರಿ 55 ಸಾವಿರ ರೂ. ದರ ಸ್ಥಿರತೆ ಕಾಯ್ದುಕೊಂಡಿದೆ.
ಮಂಗಳವಾರ ಟೆಂಡರ್ನಲ್ಲಿ ಡಬ್ಬಿ ತಳಿ ಕ್ವಿಂಟಾಲ್ಗೆ 6389ರಿಂದ 76699 ರೂಪಾಯಿವರೆಗೆ ಮಾರಾಟವಾಗಿದೆ. ಸರಾಸರಿ ದರ 63509 ರೂ. ಇತ್ತು. ಕಡ್ಡಿ ತಳಿ ಕ್ವಿಂಟಾಲ್ಗೆ 5509 ರಿಂದ 70777 ರೂಪಾಯಿವರೆಗೆ ಮಾರಾಟವಾಗಿ, ಸರಾಸರಿ ದರ 56529 ರೂ. ಇತ್ತು. ಗುಂಟೂರು ತಳಿ ಕ್ವಿಂಟಾಲ್ಗೆ 2509 ರಿಂದ 25869 ರೂ.ವರೆಗೆ ಮಾರಾಟವಾದರೆ, ಸರಾಸರಿ ದರ 15899 ರೂ. ಲಭಿಸಿದೆ.