Crime 
ಹಾವೇರಿ

ಮನೆ ಬೀಗ ಮುರಿದು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಕರಿಯಪ್ಪ ಅರಳಿಕಟ್ಟಿ

ಸವಣೂರ: ಮನೆ ಬೀಗ ಮುರಿದು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಪಟ್ಟಣದ ಕಾರಿಗಾರ ಪ್ಲಾಟ್ನಲ್ಲಿ ನಡೆದಿದೆ.

ರಜೀಯಾ ಕಣವಿ ಎಂಬುವರ ಮನೆ ಕಳ್ಳತನ ಆಗಿರುವುದು.

ಇವರ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಯ ಹಿಂಭಾಗದ ಬಾಗಿಲು ಮುರಿದು ಒಳಗೆ ನುಗ್ಗಿದ ಖದೀಮರು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.