ಹಾವೇರಿ: ಮನೆ ಬಳಿಯ ದಡ್ಡಿಯಲ್ಲಿ ನಿಲ್ಲಿಸಿದ್ದ 1.45 ಲಕ್ಷ ರೂ. ಮೌಲ್ಯದ 10 ಆಡು ಮತ್ತು 2 ಹೋತು ಮರಿಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ಮಾಚಾಪೂರ ಗ್ರಾಮದಲ್ಲಿ ನಡೆದಿದೆ.
ದುರಗಪ್ಪ ಬಸಪ್ಪ ದೊಡ್ಡಮನಿ (30) ಎಂಬುವರ ಆಡುಗಳನ್ನು ಕಳ್ಳತನ ಮಾಡಿರುವುದು.
ಇವರು ತಮ್ಮ ಮನೆಯ ಪಕ್ಕದ ದಡ್ಡಿಯಲ್ಲಿ ಆಡುಗಳನ್ನು ನಿಲ್ಲಿಸಿದ್ದರು. ರಾತ್ರಿ ಸಮಯದಲ್ಲಿ ಯಾರೋ ಖದೀಮರು ಅವುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.