ಬ್ಯಾಡಗಿ ಪಟ್ಟಣದಲ್ಲಿ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರಗಳನ್ನು ವಸತಿ ಸಚಿವ ಬಿ.ಜೆಡ್. ಜಮೀರ್ಅಹ್ಮದ್ಖಾನ್ ವಿತರಿಸಿದರು. ಸಚಿವ ಶಿವಾನಂದ ಪಾಟೀಲ, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಇತರರಿದ್ದರು.
ಬ್ಯಾಡಗಿ: ನಿವೇಶನ ಪಡೆದ ಎಲ್ಲ ಬಡಕುಟುಂಬಗಳಿಗೆ ಮುಂದಿನ ಬಜೆಟ್ ಬಳಿಕ ಮನೆ (House) ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ವಸತಿ ಸಚಿವ ಬಿ.ಜೆಡ್. ಜಮೀರ್ಅಹ್ಮದ್ಖಾನ್ ಭರವಸೆ ನೀಡಿದರು.
ಪಟ್ಟಣದ ಎನ್ಬಿಬಿ ಲಯನ್ಸ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮೊದಲ ಹಂತದ ನಿವೇಶನಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ 1.10 ಲಕ್ಷ ಕುಟುಂಬಗಳಿಗೆ ಮನೆಯ ಹಕ್ಕುಪತ್ರ ನೀಡಲಾಗಿದೆ. ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷದವರ ಟೀಕೆಗೆ ನಾವು ಅನುಷ್ಠಾನಕ್ಕೆ ತರುವ ಮೂಲಕ ಉತ್ತರಿಸಿದ್ದೇವೆ. ಆರನೇ ಗ್ಯಾರಂಟಿಯಾಗಿ ರಾಜ್ಯದಲ್ಲಿ 1,80,253 ಮನೆಗಳು ನಿರ್ವಣಗೊಳ್ಳಲಿವೆ. ಈ ಕುರಿತು ಮುಖ್ಯಮಂತ್ರಿ ಬಳಿ ರ್ಚಚಿಸಿದ್ದು, ಯೋಜನೆ ಸಿದ್ಧಗೊಂಡಿದೆ. ಈಗ ಹಕ್ಕುಪತ್ರ ನೀಡಿದ ಎಲ್ಲರಿಗೂ ಮನೆ ನಿರ್ವಿುಸಿಕೊಡುವ ಭೂಮಿಪೂಜೆ ಸಮಾರಂಭಕ್ಕೂ ಆಗಮಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಊಳುವನೇ ಭೂಮಿ ಒಡೆಯ ಕಾನೂನು ಕರ್ನಾಟಕ ಮೊದಲ ಬಾರಿಗೆ ಜಾರಿಗೊಳಿಸಿತು. ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಆಶ್ರಯ ಮನೆ ಯೋಜನೆ ಜಾರಿಗೊಳಿಸಿದರು. ಬಡವರ ಪರವಾಗಿ ನ್ಯಾಯ ಕೊಟ್ಟ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಜಿಲ್ಲೆಯಲ್ಲಿ ಹಸಿ ಬರಕ್ಕೆ ಹಾನಿಗೊಂಡ ಎಲ್ಲ ರೈತರಿಗೆ ಪರಿಹಾರ ಸಿಗಲಿದೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಅವರು ವಿವಿಧ ಬೇಡಿಕೆ ಈಡೇರಿಸಲು ಸಚಿವರಿಗೆ ಮನವಿ ಮಾಡಿದರು.
ಬಡ ಕುಟುಂಬಗಳಲ್ಲಿ ಸಂತಸ: 14 ವರ್ಷಗಳಿಂದ ನಿವೇಶನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದ ಬಡ ಕುಟುಂಬಗಳಲ್ಲಿ ಸಂತಸ, ಸಂಭ್ರಮ ಮನೆ ಮಾಡಿತ್ತು. ಹಿಂದೆ ಎರಡು ಬಾರಿ ಆಯ್ಕೆಪಟ್ಟಿ ಸಿದ್ಧವಾದರೂ ಹಕ್ಕುಪತ್ರ ಸಿಕ್ಕಿರಲಿಲ್ಲ. ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಕೇಳಿ ಖುಷಿಗೊಂಡ 419 ಕುಟುಂಬಗಳ ಯಜಮಾನಿಯರು ನಿವೇಶನಗಳ ಹಕ್ಕುಪತ್ರ ಪಡೆಯಲು ಕೈಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಭಾವಚಿತ್ರ ಹಿಡಿದು ಕುಳಿತ್ತಿದ್ದರು.
ಶಾಸಕ ಯಾಸೀರಖಾನ್ ಪಠಾಣ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜೀಮ್ೕರ್ ಖಾದ್ರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಕಾಂಗ್ರೆಸ್ ಘಟಕದ ಅಧ್ಯಕ್ಷ ದಾನಪ್ಪ ಚೂರಿ, ಆಶ್ರಯ ಸಮಿತಿ ಅಧ್ಯಕ್ಷ ಮುನಾಫ್ಅಲಿ ಎರೆಸೀಮೆ ಇತರರಿದ್ದರು.