ಹಾನಗಲ್ಲ: ಮನೆ ಕಟ್ಟಿಸಲು ಮಾಡಿದ ಸಾಲ ತೀರಿಸಲಾಗದೆ ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ ಗುಡ್ಡಪ್ಪ ಜಾಡರ (56) ಮೃತ ವ್ಯಕ್ತಿ.
ಇವರು ಮನೆ ಕಟ್ಟಿಸುವ ಸಲುವಾಗಿ ವಿವಿಧ ಸಂ ಹಾಗೂ ಬ್ಯಾಂಕ್ನಲ್ಲಿ 2 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ವಾಪಸ್ ಸಾಲ ತೀರಿಸಲಾಗದೆ ಮನನೊಂದು ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.