ಸವಣೂರ ತಾಲೂಕು ಇಚ್ಚಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಆನಂದಪ್ಪ ಅಕ್ಕೂರ ಅವರನ್ನು ಸನ್ಮಾನಿಸಲಾಯಿತು. ಶಂಭಣ್ಣ ಅಂಗಡಿ, ಯಲ್ಲಪ್ಪ ಗದಿಗೆಣ್ಣನವರ, ಎಲ್.ವೈ. ಗದಿಗೆಣ್ಣನವರ ಇತರರಿದ್ದರು. 
ಹಾವೇರಿ

ಅಕ್ಕೂರ ನಾಯಕತ್ವದಲ್ಲಿ ಸಹಕಾರಿ ರಂಗ ಮತ್ತಷ್ಟು ಬೆಳೆಯಲಿ

ಮಂಜುನಾಥ ಗದಗಿನ
ಸವಣೂರ: ಹಲವು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ ಕಾರ್ಯ ಮಾಡುತ್ತ ಜನಮಾನಸದಲ್ಲಿ ನೆಲೆಸಿರುವ ಆನಂದಪ್ಪ ಅಕ್ಕೂರ ಅವರು ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಸಂತಸ ತಂದಿದೆ. ಸಹಕಾರ ರಂಗವನ್ನು ಮತ್ತಷ್ಟು ಬಲ ಪಡೆಸಲು ಇವರ ನಾಯಕತ್ವ ಅವಶ್ಯ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಂಭಣ್ಣ ಅಂಗಡಿ ಹೇಳಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಆನಂದಪ್ಪ ಅಕ್ಕೂರ ಅವರಿಗೆ ತಾಲೂಕಿನ ಇಚ್ಚಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಗ್ರಾಮಸ್ಥರ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ಸಂಘದ ಅಧ್ಯಕ್ಷ ಎಸ್.ವಿ. ಗುತ್ತಲ ಮಾತನಾಡಿ, ಗ್ರಾಮಸ್ಥರ ಪರವಾಗಿ ಅಕ್ಕೂರ ಅವರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪ್ರಮುಖರಾದ ಯಲ್ಲಪ್ಪ ಗದಿಗೆಣ್ಣನವರ, ಎಲ್.ವೈ. ಗದಿಗೆಣ್ಣನವರ, ಬಸವರಾಜ ಶಿಗ್ಲಿ, ಲಕ್ಷ್ಮಣ ಕಂಬಳಿ, ಶೇಖರ ಗುತ್ತಲ, ಈಶ್ವರ ಪಾಟೀಲ, ಶಂಕ್ರಗೌಡ ಪಾಟೀಲ, ಡಾ.ಸಿದ್ದಣ್ಣ ಎಚ್., ಎಫ್.ಸಿ. ಬ್ಯಾಳಿ, ಬಿ.ವಿ. ಕಳಸದ, ಪರಶುರಾಮ ತಳವಾರ, ಪ್ರಕಾಶ ಮೈಲಾರ, ಮುದಕಪ್ಪ ಉಂಡಳ್ಳಿ, ನಿಂಗಪ್ಪ ಯರಗುಪ್ಪಿ, ಬಸಪ್ಪ ತಳವಾರ ಇತರರಿದ್ದರು.