ರಟ್ಟಿಹಳ್ಳಿ: ಮೈಯಲ್ಲಿ ಹುಷಾರು ಇಲ್ಲದ ಕಾರಣ 2 ವರ್ಷದಿಂದ ಮನೆಯಲ್ಲಿಯೆ ಇದ್ದ ವೃದ್ಧರೊಬ್ಬರು ಮನೆ ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಸೂರ ಗ್ರಾಮದಲ್ಲಿ ನಡೆದಿದೆ.
ಮಂಜುನಾಥ ನಾಗೇಶಪ್ಪ ಗೋಸಂಗಿ (65) ಮೃತ ವೃದ್ಧ.
ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.