Haveri, West Bangala, Assam, Election, Win, BJP Vijayotsava,
ಹಾವೇರಿ: ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿ ಬಹುಮತ ಗಳಿಸಿದ ಹಿನ್ನೆಲೆಯಲ್ಲಿ ನಗರದ ಎಂ.ಜಿ.ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬಿಜೆಪಿ ಇಂದು ದಾಖಲೆ ನಿರ್ಮಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಗೆ ಜನ ಬೆಂಬಲ ಸೂಚಿಸಿ, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿ.ಜೆ.ಪಿ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಮಮತಾ ಬ್ಯಾನರ್ಜಿ ಹಲವು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೆ ಸಹಕಾರ ನೀಡುವ ಮೂಲಕ ದೇಶದ ಭದ್ರತೆಯಲ್ಲಿ ಆತಂಕ ಮೂಡಿಸಿದ್ದರು. 2026ರ ಚುನಾವಣೆಯಲ್ಲಿ ಮತತದಾರರು ದೇಶದ ಪರವಾಗಿ ಮತ ಚಲಾಯಿಸುವ ಮೂಲಕ ಮಮತಾ ಬ್ಯಾನರ್ಜಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಬಿಜೆಪಿ ಈಗ ವಿಶ್ವದ ಬಲಿಷ್ಠ ಪಕ್ಷವಾಗಿ ಬೆಳದಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಬಹುಮತ ಪಡೆದು ಇತಿಹಾಸ ನಿರ್ಮಿಸಿದೆ. ಮಮತಾ ಬ್ಯಾನರ್ಜಿಯ ದುರಾಡಳಿತಕ್ಕೆ ಬೇಸತ್ತ ಜನರು ರಾಷ್ಟ್ರ ಸುರಕ್ಷತೆಯ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಹಾವೇರಿ ನಗರ ಮಂಡಲದ ಅಧ್ಯಕ್ಷ ಕಿರಣ ಕೊಳ್ಳಿ ಮಾತನಾಡಿದರು.
ಬಿಜೆಪಿ ಕಾರ್ಯಕರ್ತರಾದ ವಿಜಯಕುಮಾರ ಚಿನ್ನಿಕಟ್ಟಿ, ಜಗದೀಶ ಕನವಳ್ಳಿ, ಲತಾ ಬಡ್ನಿಮಠ, ಮಂಜುನಾಥ ಮಡಿವಾಳರ, ಗುಡ್ಡಪ್ಪ ಭರಡಿ, ನಾಗರಾಜ ಹರಿಗೋಲ, ಮಧುಕೇಶ ಹಂದ್ರಾಳ, ಕುಮಾರ ಹತ್ತಿ, ಶಂಭುಲಿಂಗ ಹತ್ತಿ, ರೋಹಿಣಿ ಪಾಟೀಲ, ರಾಮಕ್ಕ ವಡ್ಡರ, ರೇಣುಕಾ ಗೌಳಿ, ಮಂಜು ಮಲಗೋಡ, ಶ್ರೀಕಾಂತ ವಡ್ಡರ, ಭಾಗ್ಯಶ್ರೀ ಮೋರೆ, ಫಕ್ಕೀರೇಶ ಯಾದವ, ಸುನೀಲ ರಾಯ್ಕರ, ಸದಾನಂದ ಸುರಳಿಹಳ್ಳಿ, ಎಂ.ಎಸ್.ಪಾಟೀಲ, ಉಜನೇಶ ಮೇಟಿ, ಚಂದ್ರಶೇಖರ ಅಗಡಿ, ಪವನ ಎರೆಸೀಮಿ, ಕುಶಾಲ ಕನವಳ್ಳಿ, ವಿಶ್ವನಾಥ ಕಿತ್ತೂರಮಠ, ಆನಂದ ಕಲಾಲ, ನಿಸರ್ಗ ಗಡ್ಡಿ, ಕಿರಣ ಖಂಡೇಲವಾಲ, ಮುತ್ತಣ್ಣ ಮುಷ್ಠಿ, ಯಲ್ಲಪ್ಪ ಮಡಿವಾಳರ, ಅಕ್ಕಮ್ಮ ಹರ್ತಿ, ಶ್ರೀದೇವಿ ಹಿರೇಮಠ, ಇತರರಿದ್ದರು.