Haveri, Taluk, Creat History, SSLC, Result, BEO, MH Patil,
ಹಾವೇರಿ: ಹಾವೇರಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂದರೆ 84 ಪ್ರೌಢಶಾಲೆಗಳಲ್ಲಿ 58 ಪ್ರೌಢಶಾಲೆಗಳು ಶೇಕಡಾ ನೂರರಷ್ಟು ಫಲಿತಾಂಶ ಮಾಡಿವೆ ಎಂದು ಹಾವೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತುಂಬಾ ಕಡಿಮೆ ಫಲಿತಾಂಶ ಅಂದರೆ ಶೇ.75.86 ಆಗಿದೆ. 84 ಪ್ರೌಢಶಾಲೆಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳ ಸಾಧನೆ ಶೇ.97.11ರಷ್ಟು ಆಗಿದೆ. ಅನುದಾನಿತ ಪ್ರೌಢಶಾಲೆಗಳ ಫಲಿತಾಂಶ ಶೇ.96.31ರಷ್ಟು ಹಾಗೂ ಅನುದಾನ ರಹಿತ ಪ್ರೌಢಶಾಲೆಗಳು ಶೇ.99.04ರಷ್ಟು ಫಲಿತಾಂಶ ದಾಖಲಿಸಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ತಾಲೂಕಿನ 409 ವಿದ್ಯಾರ್ಥಿಗಳು 409 ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ.
ಶೇ.97.45ರಷ್ಟು ಗ್ರಾಮೀಣ ವಿದ್ಯಾರ್ಥಿಗಳು, ಶೇ.97.35ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಹಾವೇರಿ ತಾಲೂಕಿನ ಐತಿಹಾಸಿಕ ಫಲಿತಾಂಶಕ್ಕೆ ತಾಲೂಕಿನ ಎಲ್ಲ ವಿದ್ಯಾರ್ಥಿಗಳು, ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಲ್ಲ ಅಧಿಕಾರಿಗಳು, ಶಾಸಕರು, ಪಾಲಕರು, ಸಾರ್ವಜನಿಕರ ಪ್ರೋತ್ಸಾಹ ಕಾರಣವಾಗಿದೆ ಎಂದು ಬಿಇಒ ಎಂ.ಎಚ್.ಪಾಟೀಲ ತಿಳಿಸಿದ್ದಾರೆ.