womens day, marathon, winners
ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ಮಹಿಳೆಯರಿಗಾಗಿ ಮ್ಯಾರಥಾನ್ ಮತ್ತು ವಿವಿಧ ಮನೋರಂಜನಾ ಕ್ರೀಡೆಗಳು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದವು. ಈ ಸ್ಪರ್ಧೆಯಲ್ಲಿಧಾರವಾಡ, ಉತ್ತರಕನ್ನಡ ಜಿಲ್ಲೆಯ ಕೆಲವರು ಪ್ರಮುಖ ಬಹುಮಾನಗಳನ್ನು ಪಡೆದಿದ್ದಾರೆ.
12 ವರ್ಷ ಮೇಲ್ಪಟ್ಟ ಮಹಿಳೆಯರ ಐದು ಕಿಮೀ. ಓಟದ ಸ್ಪರ್ಧೆಯಲ್ಲಿ ಧಾರವಾಡದ ಶಿಲ್ಪಾ ಆರ್. ಹೊಸಮನಿ ಹಾಗೂ ಸುಪ್ರಿಯಾ ಸಿದ್ದಿ ಮತ್ತು ಕಾರವಾರದ ಸುಪ್ರಿತಾ ಚನ್ನಯ್ಯ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳನ್ನು ಸಾಕ್ಷಿ ಗುಡಿಹಿಂದ್ಲರ್, ಅರ್ಪಿತಾ ಮಡಿವಾಳರ, ಸೃಷ್ಟಿ ತಿಳುವಳ್ಳಿ, ಐಶ್ವರ್ಯ ಬೆನ್ನೂರ, ಅರ್ಚನಾ ಲಮಾಣಿ, ಸಂಜನಾ ರೊಟ್ಟಿ ಹಾಗೂ ಈರಮ್ಮ ಗೌರಕ್ಕನವರ ಪಡೆದುಕೊಂಡಿದ್ದಾರೆ. 3 ಕಿಮೀ ಮ್ಯಾರಥಾನ್‌ನಲ್ಲಿ ಧಾರವಾಡದ ಶ್ರೇಯಾ ಘಂಟಿ ಹಾಗೂ ರಾಜಶ್ರೀ ಮರೇದ, ಸವಣೂರಿನ ಲಕ್ಷ್ಮೀ ಹಡಪದ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಸಾವಿತ್ರಿ ಮಿರಾಶಿ, ಪ್ರಿಯಾ ಪವಾರ, ವೈದೇಹಿ, ಅನನ್ಯ ಕಮಾಟಿ, ನೇತ್ರಾ ಮಲ್ಲೂರ, ಚಂದನಾ ಮುರಡೇರ ಹಾಗೂ ನಿವೇದಿತಾ ಕೊಪ್ಪದ ನಂತರದ ಸ್ಥಾನ ಪಡೆದಿದ್ದಾರೆ.
30 ವರ್ಷದೊಳಗಿನ ಮಹಿಳೆಯರ ವಿಭಾಗದಲ್ಲಿ 100 ಮೀ. ಓಟದಲ್ಲಿ ಚಂದ್ರಕಲಾ ಹೊಸಮನಿ- ಪ್ರಥಮ, ನೀಲಮ್ಮ -ದ್ವಿತೀಯ ಹಾಗೂ ರೇಖಾ ಜಾಡರ್- ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗೋಣಿಚೀಲ ಓಟದಲ್ಲಿ ಲಕ್ಷ್ಮೀ ಜಾಡರ ಪ್ರಥಮ-, ಶ್ರೇಯಾ ಪಿ.ಜಿ.-ದ್ವಿತೀಯ ಹಾಗೂ ನೀಲಮ್ಮ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
30 ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ 100 ಮೀ. ಓಟದಲ್ಲಿ ಶೋಭಾ ಲಮಾಣಿ-ಪ್ರಥಮ, ಚೇತನಾ ಕಾರಗಿ-ದ್ವಿತೀಯ ಹಾಗೂ ರೇಣುಕಾ ನಾಯಕ- ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗೋಣಿಚೀಲ ಓಟದಲ್ಲಿ ಶಾರದಾ ಲಮಾಣಿ ಪ್ರಥಮ-, ವಿಶಾಲಾಕ್ಷಿ ಕಮತದ-ದ್ವಿತೀಯ ಹಾಗೂ ಭಾರತಿ ಕುರುವತಿಮಠ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟ ಮಹಿಳೆಯರ ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಲಕ್ಷ್ಮೀ ಜಾಡರ -ಪ್ರಥಮ, ನೀಲಮ್ಮ-ದ್ವಿತೀಯ ಹಾಗೂ ಭಾಗ್ಯ ಜನ್ನು- ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಂಜುಳಾ ಬಿ, ಅರ್ಪಿತಾ ಪಿ.ಎಂ., ಶೋಭಾ ಲಮಾಣಿ, ಅಶ್ವಿನಿ ಎಂ.ಕೆ., ಶೋಭಾ ಸಿ., ರೇಖಾ ಎಂ.ಜೆ, ನೀಲಮ್ಮ, ಸಂಜನಾ ಎಂ.ಎಚ್, ರತ್ನಾ ಟಿ ಹಾಗೂ ರಕ್ಷತಾ ಬಿ ಪ್ರಥಮ ಹಾಗೂ ಅನುರಾಧಾ ಪೂಜಾರ, ಕಮಲಮ್ಮ ಕೆ.ಎನ್. , ಗಾನವಿ ಪಾಟೀಲ, ಪ್ರತಿಭಾ ಬೆಂಡಿಗೇರಿ, ಸಂಗೀತಾ ಪೂಜಾರ, ಪಲ್ಲವಿ ಪಾಟೀಲ, ಲಕ್ಷ್ಮೀ ಎಂ., ಎಸ್.ಎಚ್, ಸೊರಟೂರ, ಸೌಜನ್ಯ ಹಾಗೂ ಚೈತ್ರಾಬಾಯಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರಾಣೆಬೆನ್ನೂರ ವರ್ಷಿತಾ ತಂಡ ಪ್ರಥಮ ಹಾಗೂ ಹಾವೇರಿ ಪೂರ್ವಿಕಾ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.