Haveri, SP Office, Summer Camp, Innaguration,  
ಹಾವೇರಿ

ಹಾವೇರಿ; ಪೊಲೀಸರ ಮಕ್ಕಳಿಗೆ ಬೇಸಿಗೆ ಶಿಬಿರಕ್ಕೆ ಚಾಲನೆ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ವತಿಯಿಂದ ಎಸ್‌ಪಿ ಕಾರ್ಯಾಲಯದಲ್ಲಿ ಆಯೋಜಿಸಿರುವ 10 ದಿನಗಳ ಬೇಸಿಗೆ ಶಿಬಿರಕ್ಕೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಂಗಳವಾರ ಚಾಲನೆ ನೀಡಿದರು.
ಎಸ್‌ಪಿ ಅವರ ಆದೇಶದ ಮೇರೆಗೆ ಸತತವಾಗಿ ಮೂರನೇ ವರ್ಷ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿದೆ. ಮಕ್ಕಳಿಗಾಗಿ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.
10 ದಿನ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಯೋಗ, ಕರಾಟೆ, ಚಿತ್ರಕಲೆ, ಸಂಗೀತ, ಮೊಬೈಲ್ ಚಟ ಬಿಡಿಸುವುದು, ವಚನ ವಾಚನ, ಮತ್ತಿತರ ಚಟುವಟಿಕೆಗಳನ್ನು ಜಿಲ್ಲಾ ಸಮಾಲೋಚಕಿ ಗಾಯತ್ರಿ ಹೆಗಡೆ ಹಾಗೂ ಆಯ್ದ ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ ಎಂದು ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ ತಿಳಿಸಿದ್ದಾರೆ.