sp, new year 
ಹಾವೇರಿ

ಹೊಸ ವರ್ಚಾಚರಣೆ; 36 ಚೆಕ್‌ಪೋಸ್ಟ್, ಡ್ರಂಕ್ ಆ್ಯಂಡ್ ಡ್ರೈವ್‌ಗೆ ದಂಡ; ಎಸ್‌ಪಿ ಯಶೋಧಾ ವಂಟಗೋಡಿ

ಹಾವೇರಿ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹಾವೇರಿ ಶಹರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಯ 36 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.
ನಗರದ ಎಸ್‌ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರತೆಗಾಗಿ 4 ಡಿಎಸ್‌ಪಿ, 14 ಸಿಪಿಐ, 35 ಪಿಎಸ್‌ಐ, 41 ಎಎಸ್‌ಐ, 150 ಗೃಹರಕ್ಷಕದಳ ಸಿಬ್ಬಂದಿ, 8 ಡಿಎಆರ್ ತುಕಡಿ, 1 ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಂಜೆಯಿಂದಲೇ 36 ಕಡೆಗಳಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಆರಂಭಿಸಲಾಗುವುದು ಎಂದರು.
ಹೊಸ ವರ್ಷದ ನೆಪದಲ್ಲಿ ತ್ರಿಬಲ್ ರೈಡಿಂಗ್, ವ್ಹೀಲಿಂಗ್, ಸ್ಟಂಟ್, ವೇಗವಾದ ಡ್ರೈವಿಂಗ್ ಮಾಡುವಂತಿಲ್ಲ. ಬೇರೆಯವರಿಗೆ ತೊಂದರೆ ಕೊಟ್ಟು ಆಚರಿಸುವಂತಿಲ್ಲ. ಮದ್ಯ ಮಾರಾಟಕ್ಕೆ ಯಾವುದಕ್ಕೂ ಹೆಚ್ಚುವರಿ ಅವಕಾಶ ಇಲ್ಲ. ಕಾಲಮಿತಿಯೊಳಗೆ ಆಚರಿಸಬೇಕು. ಮಾರಕಾಸ್ತ್ರ ತಮ್ಮೊಂದಿಗೆ ಕೊಂಡೊಯ್ಯುವಂತಿಲ್ಲ. ರಸ್ತೆ ಬಂದ್ ಮಾಡುವಂತಿಲ್ಲ, ಸರ್ವಿಸ್ ರಸ್ತೆಯಲ್ಲಿ ಪಾರ್ಟಿ ಮಾಡುವಂತಿಲ್ಲ. ಜಿಲ್ಲೆಯಲ್ಲಿ ವರ್ಷಾಚರಣೆಗೆ ಯಾವುದೇ ಇವೆಂಟ್ ಆಯೋಜಿಸಲಾಗಿಲ್ಲ. ಎಲ್ಲೆಡೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಗುವುದು. ಮದ್ಯ ಸೇವಿಸಿ ವಾಹನ ಚಲಾಯಿಸುವಂತಿಲ್ಲ ಎಂದರು.
ರಸ್ತೆ ಸಂಚಾರ ನಿಯಮ ಪಾಲನೆ, ಅನುಮಾನಾಸ್ಪದ ವ್ಯಕ್ತಿ, ಕೃತ್ಯ ಕಂಡರೆ ತುರ್ತು ಮಾಹಿತಿಗಾಗಿ 112ಗೆ ಕರೆ ಮಾಡಿ ಎಂದು ಮನವಿ ಮಾಡಿದರು.