Haveri, SC ST, Kalyana Samiti, Transport Dept, Meeting,Haveri, SC ST, Kalyana Samiti, Transport Dept, Meeting, 
ಹಾವೇರಿ

ಸಾರಿಗೆ ನೌಕರರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಿ; ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಆಗ್ರಹ

ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಒತ್ತಾಯಿಸಿದರು.
ನಗರದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರೊಂದಿಗೆ ಆಯೋಜಿಸಿದ್ದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಲ್ಲಿ ಶಕ್ತಿ ಯೋಜನೆಯೂ ಒಂದಾಗಿದ್ದು, ಸಾರಿಗೆ ನೌಕರರ ಶ್ರಮದಿಂದ ಈ ಯೋಜನೆ ಯಶಸ್ವಿಯಾಗಲು ಸಹಕಾರಿಯಾಗುತ್ತಿದೆ. ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಿಎಂ ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕರೆ ನೀಡಿದ್ದು, ಕಲ್ಯಾಣ ಸಮಿತಿ ಬೆಂಬಲ ನೀಡಲಿದೆ ಎಂದರು.
ಸಭೆಯಲ್ಲಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರಾದ ಎಂ.ಎಸ್.ಪವಾರ, ಎಸ್.ಎಸ್.ಸೋಮನಾಳ, ಎಂ.ಬಿ.ಅಂಗಡಿ, ಎ.ಎಸ್.ಅಂಗಡಿ, ಸಿ.ಬಿ.ಗೌಡರ, ಎನ್.ಎಸ್.ತಾಂಬೇಕರ, ಜಿ.ಆರ್.ಸಾಹುಕಾರ, ಎ.ವಿ.ಇಟಗಿ, ಜೆಟ್ಟಿ ರಾಜಶೇಖರ, ಐ.ಎಂ.ಬಡಿಗೇರ, ಜಿ.ಬಿ.ಇಟಗಿ, ವಿ.ಕೆ.ಕಮ್ಮಾರ, ಪಿ.ಎಚ್.ದೊಡ್ಡಮನಿ, ಕೆ.ಪಿ.ಕೊರವರ, ಎಂ.ಜೆ.ಹಿರೇಮಠ, ಝಡ್.ಐ.ಕರ್ಜಗಿ, ಲಿಂಗರಾಜ ನಾಯ್ಕ, ಉಮೆದುಲ್ಲಾ ಎಸ್., ಎಸ್.ಎಂ.ದೇವಣ್ಣನವರ, ಆರ್.ಎಂ.ನದಾಫ, ಆರ್.ಎಂ.ಕೆಳಗಡೆ, ಇತರರಿದ್ದರು.