haveri, Savanur, Railway, Union, Programm,
ಸವಣೂರ: ಕೇಂದ್ರ ಸರ್ಕಾರ ನೌಕರರ ಭವಿಷ್ಯದ ದೃಷ್ಟಿಯಿಂದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಜಾರಿಗೊಳಿಸಬೇಕು. ರೈಲ್ವೆ ಕಾರ್ಮಿಕರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ನೈರುತ್ಯ ರೈಲ್ವೆ ಎಂಪ್ಲಾಯೀಸ್ ಸಂಘದ ಹುಬ್ಬಳ್ಳಿ ವಿಭಾಗೀಯ ಅಧ್ಯಕ್ಷ ಶ್ರೀಕಾಂತ ಗೋಕಾಕ ಒತ್ತಾಯಿಸಿದರು.
ತಾಲೂಕಿನ ಯಲವಿಗಿಯ ಹಳೆಯ ರೈಲು ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ನೈರುತ್ಯ ರೈಲ್ವೆ ಎಂಪ್ಲಾಯೀಸ್ ಸಂಘದ ಸೆಕ್ಷನ್ ಶಾಖಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಈಗಿರುವ 12 ಗಂಟೆ ಬದಲಾಗಿ 8 ಗಂಟೆ ಕೆಲಸ, ಶೇ.60ರಷ್ಟು ಎಲ್‌ಡಿಸಿ ಕೋಟಾ ಎಲ್ಲ ನೌಕರರಿಗೂ ಅನ್ವಯ ಆಗಬೇಕು ಎಂದು ಆಗ್ರಹಿಸಿದರು.
ರೈಲ್ವೆ ಇಲಾಖೆಯಲ್ಲಿನ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳು ಸರಿಯಾದ ನೌಕರರಿಗೆ ಸಿಗಬೇಕಂದರೆ ಲ್ಲರೂ ಒಗ್ಗಟ್ಟಾಗಬೇಕು ಎಂದರು.
ವಲಯದ ಅಧ್ಯಕ್ಷ ಚಂದ್ರಶೇಖರ ಕಟ್ಟಿಮನಿ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಅತ್ಯಂತ ಶ್ರಮಜೀವಿಗಳು ಅಂದರೆ ಇಂಜಿನಿಯರಿಂಗ್ ಇಲಾಖೆ ನೌಕರರು. ಕಾರ್ಮಿಕರು ರೈಲು ಹಳಿಗಳಲ್ಲಿ ಕೆಲಸ ಮಾಡುವ ಸಮಯದಲ್ಲಿ ಅತ್ಯಂತ ಸುರಕ್ಷಿತ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ಹಸಬೇಕು ಎಂದು ಮನವಿ ಮಾಡಿದರು.
ವಿಭಾಗದ ಕಾರ್ಯದರ್ಶಿ ಬೃಂದಾವನ ನಾಯಕ ಮಾತನಾಡಿ, ಇದು ಕಾರ್ಮಿಕರ ಎಂಪ್ಲಾಯೀಸ್ ಸಂಘಟನೆ ಆಗಿದ್ದು, ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸಂಘ ಸದಾ ಸಿದ್ಧ ಎಂದರು.
ಅಧಿಕಾರಿಗಳಾದ ರಾಕೇಶಕುಮಾರ ವರ್ಮಾ, ಬಿ.ಎಸ್.ಆಂಜನೇಯ, ವಿ.ಸಿ.ಮಹೇಶಕುಮಾರ, ನೈರುತ್ಯ ರೈಲ್ವೆ ಎಂಪ್ಲಾಯಿಸ್ ಸಂಘದ ವಿವಿಧ ಬ್ರ್ಯಾಂಚ್‌ಗಳ ಪದಾಧಿಕಾರಿಗಳಾದ ಪ್ರಕಾಶಂ, ಮಹಮ್ಮದ್ ಗೌಸ್, ಜಾನ್ಸನ್, ವೀರಕುಮಾರ, ಸಂಪತ್‌ಕುಮಾರ ಲಮಾಣಿ, ಗುಡ್ಡಪ್ಪ ಕಲಕೇರಿ, ಜಗದೀಶ ಭಜಂತ್ರಿ, ರವಿ ಪವಾಡೆಪ್ಪನವರ, ಬಸವರಾಜ ಕಮ್ಮಾರ, ನೀಲಪ್ಪ ಎನ್., ಪ್ರವೀಣ ಗಿರ್ಜಿ, ಇತರರಿದ್ದರು. ಶಿವಾನಂದ ಸ್ವಾಗತಿಸಿದರು. ಯಲ್ಲಪ್ಪ ತಳವಾರ ನಿರೂಪಿಸಿದರು.