Haveri, Sahakara, Sangha,
ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನ ಮೂರು ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ಉಪವಿಧಿಯ ಉದ್ದೇಶಗಳ ಅನ್ವಯ ಕಾರ್ಯನಿರ್ವಹಿಸಲು ವಿಫಲವಾಗಿ ನಿಷ್ಕ್ರೀಯಗೊಂಡಿವೆ. ಇಂತಹ ಸಂಘಗಳನ್ನು ಸಮಾಪನೆಗೊಳಿಸಿ, ಅವುಗಳ ನೋಂದಣಿ ರದ್ದುಪಡಿಸಲು ಉದ್ದೇಶಿಸಲಾಗಿದೆ.
ಡೊಮ್ಮನಾಳ, ಚಿಕ್ಕಹುಲ್ಲಾಳ ಹಾಗೂ ತಿಳವಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರದ್ದುಪಡಿಸಲು ಗುರುತಿಸಲಾಗಿದೆ.
ಈ ಮೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಅಥವಾ ಆಡಳಿತ ಮಂಡಳಿ ಸದಸ್ಯರಿಗೆ ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಏಳು ದಿನದೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ಆಕ್ಷೇಪಣೆಗಳನ್ನು ಸಹಕಾರ ಸಂಘಗಳ ಉಪನಿಬಂಧಕರು, ಹಾವೇರಿ ಜಿಲ್ಲೆ, ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು.
ತಪ್ಪಿದಲ್ಲಿ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ ಎಂದು ಪರಿಗಣಿಸಿ ಈ ಸಂಘಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದತಿಗೆ ಕ್ರಮವಹಿಸಲಾಗುವುದು ಎಂದು ಸಹಕಾರಿ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.