Haveri, Rural. Hescom, Powr Cut, April 18th,  
ಹಾವೇರಿ

ಹಾವೇರಿ ಶಹರ, ಸುತ್ತಮುತ್ತ ವಿದ್ಯುತ್ ವ್ಯತ್ಯಯ; ಏ.18ರಂದು

ಹಾವೇರಿ: ನಗರದ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವ ಕಾರಣ ಏ.18ರಂದು ಹಾವೇರಿ, ಕೆರಿಮತ್ತಿಹಳ್ಳಿ, ಗಾಂಧೀಪುರ ಹಾಗೂ ಆಡೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಂಪೂರ್ಣ ಹಾವೇರಿ ನಗರ, ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ, ದೇವಗಿರಿ, ಡಿ.ಸಿ.ಆಫೀಸ್, ದೇವಗಿರಿ ಯಲ್ಲಾಪುರ, ನಾಗನೂರ, ಕೋಳೂರು, ಗಣಜೂರ, ಕರ್ಜಗಿ, ಯತ್ತಿನಹಳ್ಳಿ, ದೇವಿಹೊಸೂರ, ದಿಡಗೂರ, ಹಿರೇಲಿಂಗದಹಳ್ಳಿ, ಹೊಂಬರಡಿ, ಹೊಸಳ್ಳಿ, ಕಬ್ಬೂರು, ಕಲ್ಲಾಪುರ, ಕನಕಾಪುರ, ಕೆರಿಮತ್ತಿಹಳ್ಳಿ, ಸಂಗೂರ, ತೊಟದಯಲ್ಲಾಪುರ, ವೀರಾಪುರ, ವೆಂಕಟಾಪುರ, ಗೌರಾಪುರ, ಎಸ್.ಪಿ. ಆಫೀಸ್, ಕುರುಬಗೊಂಡ, ಬಿದರಗಡ್ಡಿ, ಕೋಡಿಹಳ್ಳಿ, ತಿಮ್ಮಾಪುರ, ಕುಳೇನೂರು, ಕಲ್ಲಾಪುರ, ಹೊಸೂರು ಹಾಗೂ ಈ ಫೀಡರ್ ವ್ಯಾಪ್ತಿಗೆ ಬರುವ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಹಾವೇರಿ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಕಚೇರಿ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.