rss-shakha-showing-knife, 
ಹಾವೇರಿ

ಆರ್‌ಎಸ್‌ಎಸ್ ಶಾಖೆಗೆ ನುಗ್ಗಿ ಚಾಕು ತೋರಿಸಿ ದಮ್ಕಿ; ಅನ್ಯ ಕೋಮಿನ ಬಾಲಕನಿಂದ ಬೆದರಿಕೆ, ಎಫ್‌ಐಆರ್ ದಾಖಲಿಸದ ಪೊಲೀಸರು

ಹಾವೇರಿ: ನಗರದ ಮೈಲಾರ ಮಹದೇವಪ್ಪ ವೃತ್ತದ ಬಳಿಯ ನಂಬರ್ 2 ಸರ್ಕಾರಿ ಶಾಲಾ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಯುತ್ತಿದ್ದ ವೇಳೆ ಅನ್ಯ ಕೋಮಿನ ಬಾಲಕನೊಬ್ಬ ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ ಬುಧವಾರ ನಡೆದಿದೆ.
ಆರ್‌ಎಸ್‌ಎಸ್ ಬಾಲಕರ ಶಾಖೆ ನಡೆಯುವ ವೇಳೆ ಸುಮಾರು 15 ವರ್ಷದ ಇಬ್ಬರು ಅನ್ಯ ಕೋಮಿನ ಬಾಲಕರು ಆಗಮಿಸಿದ್ದರು. ಅದರಲ್ಲಿ ಒಬ್ಬ ಬಾಲಕ ಜೇಬನಲ್ಲಿ ಇಟ್ಟುಕೊಂಡಿದ್ದ ಚಾಕು ಹೊರಗೆ ತೆಗೆದು ‘ಇಲ್ಲಿ ಆಟ ಆಡಬೇಡಿ. ಇಲ್ಲಿ ಆಟ ಆಡಿದರೆ ನಿಮ್ಮನ್ನು ಮುಗಿಸುತ್ತೇನೆ’ ಎಂದು ಚಾಕು ತೋರಿಸಿ ದಮ್ಕಿ ಹಾಕಿದ್ದಾನೆ. ಬಾಲಕನೊಬ್ಬನಿಗೆ ಚುಚ್ಚಲು ಯತ್ನಿಸಿದ್ದಾನೆ. ಆಗ ಸ್ಥಳದಲ್ಲಿದ್ದ ಇತರರು ತಪ್ಪಿಸಿದ್ದಾರೆ.
ಬಾಲಕ ಚಾಕು ತೋರಿಸಿದ ವಿಡಿಯೋ ವೈರಲ್ ಆಗಿದೆ. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ನೀಡಲಾಗಿದೆ. ಆದರೆ, ಪೊಲೀಸರು ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ ಎಂದು ಸ್ಥಳದಲ್ಲಿದ್ದ ಸ್ವಯಂಸೇವಕರು ದೂರಿದ್ದಾರೆ.