ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿstuck in airport ಸಿಲುಕಿಕೊಂಡಿರುವ ಶಿಗ್ಗಾಂವಿ, ಬಂಕಾಪುರ, ಹಾವೇರಿ ನಿವಾಸಿಗಳು. 
ಹಾವೇರಿ

ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಹಾವೇರಿಗರು stuck in airport

ಬಂಕಾಪುರ: ಇಂಡಿಗೋ ವಿಮಾನಗಳ ಸಂಚಾರ ರದ್ದಾದ ಕಾರಣ ಶಿಗ್ಗಾಂವಿ, ಬಂಕಾಪುರ ಸೇರಿದಂತೆ ಹಾವೇರಿ ಜಿಲ್ಲೆಯ 100ಕ್ಕೂ ಅಧಿಕ ಪ್ರಯಾಣಿಕರು ದೆಹಲಿಯ ವಿಮಾನ ನಿಲ್ದಾಣದಲ್ಲಿ stuck in airport ಪರದಾಡುವಂತಾಗಿದೆ.
ಈ ಕುರಿತು ದೆಹಲಿಯಿಂದ ವಿಜಯವಾಣಿಯೊಂದಿಗೆ ಮಾತನಾಡಿದ ಶಿಗ್ಗಾಂವಿ ಪುರಸಭೆ ಸದಸ್ಯ ರಮೇಶ ವನಹಳ್ಳಿ, ರೈತ ಬಸವರಾಜ ಶೆಟ್ಟರ್ ಅವರು, ಹೆಚ್ಚಿನ ಕೃಷಿ ಅಧ್ಯಯನಕ್ಕಾಗಿ ಬಾಯರ್ ಕಂಪನಿ ವತಿಯಿಂದ ಅಜರ್ಬೆಜಾನ್​ಗೆ ನ. 28ರಂದು ತೆರಳಿದ್ದೇವು. ಅಲ್ಲಿಂದ ಡಿ. 4ರಂದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಮುಂದಿನ ಪ್ರಯಾಣಕ್ಕೆ ಸಮಸ್ಯೆಯಾಗಿದೆ.
ನಿಲ್ದಾಣದಲ್ಲೇ ವಾಸ್ತವ್ಯ ಹೂಡಿದ್ದೇವೆ. ಸಮಸ್ಯೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಊರಿಗೆ ತೆರಳಲು ಬೇರೆ ವ್ಯವಸ್ಥೆ ಮಾಡುವಂತೆ ವಿನಂತಿಸಿದ್ದೇವೆ. ಮೊದಲು ಕರೆ ಸ್ವೀಕರಿಸಿದ್ದ ಇಬ್ಬರು, ನಂತರ ಕರೆ ಸ್ವೀಕರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.