Haveri, Red Cross, World Environment, Day,
ಹಾವೇರಿ: ಪ್ರತಿಯೊಬ್ಬ ಜೀವಿಯ ಬದುಕಿಗೆ ಉತ್ತಮ ಸಮತೋಲನವಾದ ಪರಿಸರ ಅಗತ್ಯವಾಗಿದ್ದು, ಪರಿಸರ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ಇದಕ್ಕಾಗಿ ನಾವೆಲ್ಲರೂ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು, ಪೋಷಣೆ ಮಾಡಬೇಕಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
ನಗರದ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ವಿಕಲಚೇತನರ ಪುನವರ್ಸತಿ ಕೇಂದ್ರದ ಸಹಯೋಗದೊಂದಿಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಆಯೋಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಉತ್ತಮ ಆರೋಗ್ಯಯುತ ಬದುಕಿಗೆ ಪರಿಸರ ಬಹಳ ಮುಖ್ಯವಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಗಿಡ ನೆಡುವ ಕಾರ್ಯ ಮಾಡಬೇಕಾಗಿದೆ. ಸರ್ಕಾರ ಅರಣ್ಯ ಇಲಾಖೆಯ ಜತೆಗೆ ಸಹಕಾರ ನೀಡೋಣ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಪರಿಸರ ಜಾಗೃತಿ ಘಟಕದ ಚೇರ್ಮನ್ ಸಿದ್ದರಾಜ ಕಲಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ- ಸಂಸ್ಥೆಗಳ ವತಿಯಿಂದ ಹೆಚ್ಚು ಸಸಿ ನೆಡುವ ಕೆಲಸ ಮಾಡಬೇಕಾಗಿದೆ. ಪರಿಸರದಲ್ಲಿನ ಗಿಡಗಳು ನಮಗೆ ಜೀವಾಳು ಆದ ಆಮ್ಲಜನಕ ನೀಡುತ್ತೇವೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ. ಪರಿಸರ ಉಳಿಸಿ ಬೆಳಿಸಲು ಎಲ್ಲರಿಗೂ ಪಣ ತೋಡಬೇಕಿದೆ. ರೆಡ್ ಕ್ರಾಸ್‌ನಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಸಹಕಾರ್ಯದರ್ಶಿ ಡಾ.ಪ್ರದೀಪ ದೊಡ್ಡಗೌಡ್ರ, ಖಜಾಂಚಿ ಪ್ರಭು ಹಿಟ್ನಳ್ಳಿ, ಸದಸ್ಯರಾದ ರವಿ ಹಿಂಚಿಗೇರಿ, ಹನುಮಂತಗೌಡ ಗೊಲ್ಲರ, ಉಡಚಪ್ಪ ಮಾಳಗಿ, ನಾಗಪ್ಪ ಈರಪ್ಪ ಇಚ್ಚಂಗಿ, ಶಿವಯೋಗಯ್ಯ ಹಿರೇಮಠ, ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ಪಿ.ಆರ್ ಹಾವನೂರ, ವಿಜಯಕುಮಾರ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಕೊಟ್ಟೂರ, ಉಜ್ವಲ ಹಿರೇಗೌಡರ, ಡಿ.ಡಿ.ಆರ್.ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಪಿಜಿಯೋಥೆರಪಿಸ್ಟ್ ಡಾ.ಅಂಕಿತಾ ಆನಂದ, ಇತರರು ಉಪಸ್ಥಿತರಿದ್ದರು.