Haveri, Rashtrothana School, Kargil Vijay Diwas,
ಹಾವೇರಿ: ತಾಲೂಕಿನ ದೇವಿಹೊಸೂರು ಸಮೀಪದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಇತ್ತೀಚೆಗೆ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಜರುಗಿತು.
ಶಿಕ್ಷಕಿ ರೇಖಾ ಮಾತಾಜಿ ಕಾರ್ಗಿಲ್ ಯುದ್ಧದ ಹಿನ್ನೆಲೆ, ಭಾರತೀಯ ಸೈನಿಕರ ಶೌರ್ಯ, ತ್ಯಾಗ ಹಾಗೂ ದೇಶ ರಕ್ಷಣೆಯಲ್ಲಿ ಅವರ ಅಮೋಘ ಸೇವೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ದೇಶಭಕ್ತಿ, ಕರ್ತವ್ಯನಿಷ್ಠೆ ಮತ್ತು ರಾಷ್ಟ್ರಪ್ರೇಮದ ಮಹತ್ವವನ್ನು ತಿಳಿಸುವ ಸ್ಫೂರ್ತಿದಾಯಕ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ 7ನೇ ತರಗತಿ ಹಾಗೂ ಗೋಕುಲಂ ವಿಭಾಗದ ವಿದ್ಯಾರ್ಥಿಗಳು ಕಾರ್ಗಿಲ್ ವಿಜಯ ದಿವಸದ ಮಹತ್ವ, ಭಾರತೀಯ ಸೈನಿಕರ ಸಾಹಸ ಮತ್ತು ಸ್ವಾತಂತ್ರೃವೀರರ ವೇಷಭೂಷಣ ಧರಿಸಿ ಸೈನಿಕರಿಗೆ ನಮನ ಸಲ್ಲಿಸಿದರು. ಪ್ರೇರಣಾದಾಯಕ ಭಾಷಣಗಳನ್ನು ಮಾಡಿದರು. ದೇಶಭಕ್ತಿ ಗೀತೆಗಳನ್ನು ಹಾಡಿ, ದೇಶಪ್ರೇಮ ಸಾರುವ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ನಿವೃತ್ತ ಸುಬೇದಾರ ಶಿವಪುತ್ರಪ್ಪ ಕಡ್ಲಿ, ಮೇಜರ್ ತಿರಕನಗೌಡ ಎಸ್. ಪಾಟೀಲ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.
ಪ್ರಧಾನಾಚಾರ್ಯೆ ಶ್ಯಾಮಲಾ ವಿ., ವಿನೋದ, ಪವಿತ್ರಾ ಮಾತಾಜಿ, ಹಾಗೂ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ರೇಖಾ ಭೈರಕ್ಕನವರ ನಿರೂಪಿಸಿದರು. ಕೀರ್ತಿ ಮಾತಾಜಿ ವಂದಿಸಿದರು.