Haveri, Rain Effect, Guttala, Agadi, Road, Water,
ಹಾವೇರಿ: ತಾಲೂಕಿನ ಹಾವೇರಿ- ಗುತ್ತಲ ಮಾರ್ಗದ ಮಧ್ಯೆ ಶನಿವಾರ ಭಾರೀ ಮಳೆಯಿಂದಾಗಿ ಅಗಡಿ ಕೆರೆ, ಹಳ್ಳದ ನೀರು ತುಂಬಿ ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು.
ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಅಗಡಿ ಕೆರೆ ಹಾಗೂ ಹಳ್ಳ ತುಂಬಿ ರಸ್ತೆ ಮೇಲೆ ಹರಿಯಿತು. ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಬೈಕ್, ಟ್ರಾೃಕ್ಟರ್, ಎತ್ತಿನಗಾಡಿ, ಬಸ್, ಕಾರು ಸವಾರರು ಸಮಸ್ಯೆ ಅನುಭವಿಸಿದರು. ನೀರಿನ ಹರಿವು ಹೆಚ್ಚಾಗಿದ್ದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಲು ಹರಸಾಹಸಪಟ್ಟರು. ಗಂಟೆಗಳ ಕಾಲ ನೀರಿನ ಹರಿವು ಕಡಿಮಾಯದ ನಂತರ ರಸ್ತೆ ಸಂಚಾರ ಆರಂಭವಾಯಿತು.