Haveri, Rain, Effect, Children Dance, 
ಹಾವೇರಿ

ಹಾವೇರಿ: ಸುಡುವ ಇಳೆಗೆ ತಂಪೆರೆದ ವರುಣ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಜಿಲ್ಲೆಯ ವಿವಿಧೆಡೆ ಸೋಮವಾರ ಮಳೆ ಸುರಿದಿದ್ದು, ಕಾದ ಕಬ್ಬಿಣದಂತಾಗಿದ್ದ ಇಳೆಗೆ ವರುಣದೇವ ತಂಪೆರೆದಿದ್ದಾನೆ.
ಸತತ ಬಿಸಿಲಿನಿಂದ ಜನ ಸುಸತಾಗಿದ್ದರು. ಹಾವೇರಿ ಶಹರ ಸೇರಿದಂತೆ ವಿವಿಧೆಡೆ ಸೋಮವಾರವೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ಶಾಖ ಹೆಚ್ಚಾಗಿತ್ತು. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಎರಡು ಸಲ ರಭಸವಾಗಿ ಮಳೆ ಸುರಿಯಿತು.
ಹಾವೇರಿ ಶಹರದ ಚರಂಡಿಗಳಲ್ಲಿ ಕಸ ಸಂಗ್ರಹವಾಗಿದ್ದರಿಂದ ರಸ್ತೆ ಮೇಲೆ ಮಳೆ ನೀರು ಹರಿಯಿತು. ಸಣ್ಣ ಮಳೆಗೆ ಇಷ್ಟು ಸಮಸ್ಯೆ ಉಂಟಾಗಿದ್ದು, ದೊಡ್ಡ ಮಳೆಯಾದರೆ ಹೇಗೆ ಎಂದು ಜನ ಆತಂಕ್ಕಕೀಡಾಗಿದ್ದು ಕಂಡು ಬಂತು.