Haveri, NWKSRTC, Jog Falls, Sigandhur, Routs, Bus, Trips,
ಹಾವೇರಿ: ಪ್ರತಿ ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಹಾವೇರಿ ಮತ್ತು ರಾಣೆಬೆನ್ನೂರ ನಗರಗಳಿಂದ ಜೂ.21ರಿಂದ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ದ ಪ್ರೇಕ್ಷಣೀಯ ಸ್ಥಳ ಜೋಗ್ ಫಾಲ್ಸ್ ಹಾಗೂ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ವೇಗದೂತ ಸಾರಿಗೆ ಬಸ್‌ಗಳ ಕಾರ್ಯಾಚರಣೆ ಆರಂಭಿಸಲಾಗುವುದು.
ಹಾವೇರಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆ ಹೊರಟು, ಸಿದ್ದಾಪುರ ಮಾರ್ಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಜೋಗ್ ಫಾಲ್ಸ್‌ಗೆ ತೆರಳಲಾಗುವುದು. ವಾಪಸ್ ಜೋಗ್‌ಫಾಲ್ಸ್‌ನಿಂದ ಸಂಜೆ 4 ಗಂಟೆಗೆ ಹೊರಟು ಹಾವೇರಿಗೆ ಸಂಜೆ 7.30ಕ್ಕೆ ತಲುಪುವುದು.
ಹಾವೇರಿಯಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 7.30ಕ್ಕೆ ಬಸ್ ಹೊರಡಲಿದೆ. ಆಡೂರು, ಅಕ್ಕಿಆಲೂರು, ನಾಲ್ಕರ ಕ್ರಾಸ್, ಗೊಂದಿ, ಆನವಟ್ಟಿ, ಉಳವಿ, ಸಾಗರ ಮಾರ್ಗವಾಗಿ ಕಾರ್ಯಚರಣೆ ಮಾಡಲಾಗುತ್ತದೆ. ವಾಪಸ್ ಸಂಜೆ 3.30ಕ್ಕೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಿಂದ ನಿರ್ಗಮಿಸಿ ಸಂಜೆ 7.30ಕ್ಕೆ ಹಾವೇರಿಗೆ ತಲುಪುವುದು.
ರಾಣೆಬೆನ್ನೂರಿನಿಂದ ಜೋಗ್ ಫಾಲ್ಸ್‌ಗೆ ಬೆಳಗ್ಗೆ 8.30 ಗಂಟೆಗೆ ಹಿರೆಕೇರೂರ, ಶಿರಾಳಕೊಪ್ಪ, ಸೊರಬ, ಸಿದ್ದಾಪುರ ಮಾರ್ಗವಾಗಿ ಬನವಾಸಿಯಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಕಾರ್ಯಚರಣೆ ಮಾಡಲಾಗುತ್ತದೆ. ವಾಪಸ್ ಜೋಗ್ ಫಾಲ್ಸ್ ನಿಂದ ಸಂಜೆ 4 ಗಂಟೆಗೆ ನಿರ್ಗಮಿಸಿ, ರಾಣೆಬೆನ್ನೂರಿಗೆ ಸಂಜೆ 7.30ಕ್ಕೆ ತಲುಪುವುದು.
ರಾಣೆಬೆನ್ನೂರಿನಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 7.30ಕ್ಕೆ ಬಸ್ ಹೊರಡುವುದು. ಕೋಡ, ಹಿರೆಕೇರೂರ, ಶಿರಾಳಕೊಪ್ಪ ಮಾರ್ಗವಾಗಿ ತಲುಪಲಾಗುತ್ತದೆ. ವಾಪಸ್ ಮಧ್ಯಾಹ್ನ 3 ಗಂಟೆಗೆ ಸಿಗಂದೂರಿನಿಂದ ಹೊರಟು ಸಂಜೆ 6.30ಕ್ಕೆ ರಾಣೆಬೆನೂರ ತಲುಪಲಾಗುವುದು. ಮುಂಗಡ ಬುಕ್ಕಿಂಗ್ ಸೌಲಭ್ಯವಿದ್ದು, ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ ಎಂದು ವಾ.ಕ.ರ.ಸಾ. ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.