Haveri, Nolamba Lingayata Sangha, Pratibha Puraskara,
ಹಾವೇರಿ: ನೊಳಂಬ ಲಿಂಗಾಯತ ಸಂಘ ಬೆಂಗಳೂರು ಮತ್ತು ಉಪಸಮಿತಿ ಹಾವೇರಿ ಜಿಲ್ಲೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
2026ರ ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಹಾವೇರಿ ಜಿಲ್ಲೆಯ ನೊಳಂಬ ಲಿಂಗಾಯತ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಪೋಟೋ, ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹಾಗೂ ನಕಲು ಅಂಕಪಟ್ಟಿಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು, ನೊಳಂಬ ಲಿಂಗಾಯತ ಸಂಘ, ಉಪಸಮಿತಿ ಹಾವೇರಿ, ನಂದಿಕೇಶ್ವರ ಸೌಹಾರ್ದ ಸಹಕಾರಿ ನಿಯಮಿತ (ಟ್ರ್ಯಾಕ್ಟರ್), ಕಾಗಿನೆಲೆ ಬಸ್ ನಿಲ್ದಾಣದ ಹತ್ತಿರ, ಕಲ್ಲುಮಂಟಪ ರಸ್ತೆ, ಹಾವೇರಿ ಈ ವಿಳಾಸಕ್ಕೆ ಮೇ 31ರ ಒಳಗೆ ಸಲ್ಲಿಸಬೇಕು.
ಹಾವೇರಿ ನಗರದ ಶ್ರೀ ಗುರುಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಜೂ 7ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8050868273, 6360325047, 7892306785, 9448966100, 9008929426 ಇವರನ್ನು ಸಂಪರ್ಕಿಸಿರಿ ಎಂದು ಸಂಘದ ಪ್ರಕಟಣೆ ತಿಳಿಸಿದೆ.