Haveri, Nelogal, GTTC, News, Course,  
ಹಾವೇರಿ

ನೆಲೋಗಲ್ಲ ಸರ್ಕಾರಿ ಜಿಟಿಟಿಸಿ ಕಾಲೇಜ್‌ನಲ್ಲಿ ಹೊಸ ಕೋರ್ಸ್

ಹಾವೇರಿ: ತಾಲೂಕಿನ ನೆಲೋಗಲ್ ಬಳಿ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಈ ಬಾರಿ ಟೂಲ್ಸ್ ರೂಮ್ ಮಷಿನಿಸ್ಟ್ ಎಂಬ ಒಂದು ವರ್ಷದ ಕೋರ್ಸ್ ಆರಂಭಿಸಲಾಗಿದೆ ಎಂದು ತಾಲೂಕಿನ ನೆಲೋಗಲ್ಲ ಗ್ರಾಮದ ಜಿಟಿಟಿಸಿ ಕೇಂದ್ರದ ಆಡಳಿತಾಧಿಕಾರಿ ಬಿರೇಶ ನೆಟಗಲ್ಲಣ್ಣನವರ ಸೋಮವಾಋ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ಇದೆ. ನಮ್ಮ ಸರ್ಕಾರಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದವರಿ ಶಿಷ್ಯವೇತನದ ಜತೆಗೆ ಶೇ.100ರಷ್ಟು ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.
ನಮ್ಮ ಜಿಟಿಟಿಸಿ ಕೇಂದ್ರದಲ್ಲಿ ಮೂರು ಡಿಪ್ಲೋಮಾ ಕೋರ್ಸ್‌ಗಳು ಲಭ್ಯವಿವೆ. ಈ ಪೈಕಿ ಡಿಪ್ಲೋಮಾ ಇನ್ ಟೂಲ್ ಮತ್ತು ಡೈಮೇಕಿಂಗ್ ಕೋರ್ಸ್‌ನ ಪ್ರವೇಶಾತಿ ಸೀಟುಗಳು ಭರ್ತಿಯಾಗಿವೆ. ಇನ್ನುಳಿದ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್‌ನಲ್ಲಿ 18 ಸೀಟುಗಳು ಹಾಗೂ ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಕೋರ್ಸ್‌ನಲ್ಲಿ 2 ಸೀಟುಗಳು ಮಾತ್ರ ಲಭ್ಯ ಇವೆ.
ಪ್ರವೇಶಾತಿ ಪ್ರಕ್ರಿಯೆ ಇನ್ನೇನು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಕೋರ್ಸ್‌ಗಳಿಗೆ ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಹಾಗೂ ಪಿಯುಸಿ ಮತ್ತು ಐಟಿಐನಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಎಸ್ಸೆಸ್ಸೆಲ್ಸಿ ಆಧಾರದ ಮೇಲೆ ಕೋರ್ಸ್‌ಗೆ ಪ್ರವೇಶಾತಿ ಕಲ್ಪಿಸಲಾಗುವುದು ಎಂದರು.
ಜಿಟಿಟಿಸಿ ಕೇಂದ್ರದ ಉಪನ್ಯಾಸಕರಾದ ಮಾಕತೇಶ ಎಸ್.ಎಚ್., ಸಂಪತಕುಮಾರ ಡಿ. ಇದ್ದರು.