Muslim, Sunni, Dharma Sabha 
ಹಾವೇರಿ

ಹಾವೇರಿ; ಮುಸ್ಲಿಮರ ಬೃಹತ್ ಧರ್ಮಸಭೆ ಡಿ.20, 21ರಂದು

ಹಾವೇರಿ: ನಗರದ ಹಾವೇರಿ- ಹುಬ್ಬಳ್ಳಿ ರಸ್ತೆಯ ಪ್ರವೇಶ ದ್ವಾರದ ಬಳಿ ಡಿ.20 ಹಾಗೂ 21ರಂದು ಮುಸ್ಲಿಂ ಸಮುದಾಯದವರಿಂದ ಬೃಹತ್ ಸುನ್ನಿ ತರಬೇತಿ, ಇಸ್ತಿಮಾ ಧರ್ಮಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
1,500 ವರ್ಷಗಳ ಇತಿಹಾಸವಿರುವ ಜಶ್ನ್ ಎ ಈದ್ ಮಿಲಾದ್ ಉನ್ ನಬಿ ಆಚರಣೆ ಪ್ರಯುಕ್ತ ಜಮಾತ್ ಎ ರಜಾ ಮುಸ್ತಫಾ ಸಂಘಟನೆ ವತಿಯಿಂದ ಧರ್ಮಸಭೆ ಆಯೋಜಿಸಲಾಗಿದೆ. ಡಿ.20ರಂದು ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಹಾಗೂ ಡಿ.21ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 9ರವರೆಗೆ ಸಮುದಾಯದ ಪುರುಷರಿಗಾಗಿ ಪ್ರತ್ಯೇಕವಾಗಿ ಪ್ರವಚನ ಕಾರ್ಯಕ್ರಮ ಆಯೋಜಿಸಿದ್ದಾರೆ.
ಪ್ರಮುಖ ಧರ್ಮಗುರುಗಳಾದ ಮುಫ್ತಿ ಮುಹಮ್ಮದ್ ಅಸ್ಜದ್ ರಜಾಖಾನ್, ಮುಫ್ತಿ ಜಿಯಾ ಉಲ್ ಮುಸ್ತಫಾ ಖಾದ್ರಿ, ಮುಹಮ್ಮದ್ ಹುಸ್ಸಾಮ್ ಅಹ್ಮದ್ ರಜಾ, ಮುಫ್ತಿ ಆಶಿಕ್ ಹುಸೈನ್ ಕಶ್ಮೀರಿ, ಮುಫ್ತಿ ಅಬು ಯೂಸೂಫ್ ಮುಹಮ್ಮದ್ ಖಾದ್ರಿ, ಮುಫ್ತಿ ಮುಹಮ್ಮದ್ ಶಾಹಿದ್ ರಜಾ, ಮುಫ್ತಿ ಶಹಜಾದ್ ಆಲಮ್ ಮಿಸ್ಬಾಹಿ, ರಾಜ್ಯ ಸೇರಿದಂತೆ ದೇಶದ ವಿವಿಧ ಧರ್ಮಗುರುಗಳು, ಸಾವಿರಾರು ಮುಸ್ಲಿಮರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.