Haveri, Minister Pralhad Joshi, RSS, BJP, Statement,  
ಹಾವೇರಿ

ಆರ್‌ಎಸ್‌ಎಸ್ ಬಗ್ಗೆ ಜನರೇ ಉತ್ತರ ಕೊಡುತ್ತಾರೆ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಆರ್‌ಎಸ್‌ಎಸ್ ಬಗ್ಗೆ ಬಿಜೆಪಿ ಯಾವುದೇ ರೀತಿಯಲ್ಲಿ ಉತ್ತರ ಕೊಡಲ್ಲ. ಆರ್‌ಎಸ್‌ಎಸ್‌ನವರು ಉತ್ತರ ಕೊಡುತ್ತಾರೆ. ನಮ್ಮ ಬಿಜೆಪಿ ನಾಯಕರಿಗೂ ಇದೇ ಸೂಚನೆಯನ್ನೂ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಆರ್‌ಎಸ್‌ಎಸ್ ಬಗ್ಗೆ ಜನರೇ ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಜೋಶಿ, ಹಿಂದಿನ ಗುಂಡಾಗಿರಿ ಅನುಭವದಿಂದ ಅವರು ಏನೇನೋ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ಹಾಗಿರುವಾಗ ಅಧ್ಯಕ್ಷರೂ ಹಾಗೇ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಜಿನ್ನಾ ಕಾಲದಿಂದ ಈಗಿನ ಕೇರಳದವರೆಗೂ ಕಾಂಗ್ರೆಸ್ ಮುಸ್ಲಿಂ ಲೀಗ್ ಜತೆಗೆ ಮೈತ್ರಿ ಆಗಿದೆ. ಭಯೋತ್ಪಾದಕರು, ಐಎಸ್‌ಐ ಸಂಪರ್ಕ ಹೊಂದಿದವರು ಕಾಂಗ್ರೆಸ್ ಬ್ರದರ್ಸ್. ಗಲಭೆ ಎಬ್ಬಿಸಿ ಅದರ ಲಾಭ ಪಡೆಯುವವರು ಕಾಂಗ್ರೆಸ್‌ನವರು ಎಂದರು.
ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದೇ ಕಾಂಗ್ರೆಸ್‌ಗೆ ಗೊತ್ತಿಲ್ಲ. ರಾಜ್ಯದಲ್ಲಿ ಡಿಕೆಶಿ ಸರ್ಕಾರ ಬಂದು 40 ದಿನವಾದರೂ ಸಚಿವ ಸಂಪುಟ ರಚನೆಯಾಗಿಲ್ಲ. ರಾಜ್ಯದಲ್ಲಿ ಬರ ಇದೆ. ಆದರೆ, ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲ. ಮುಖ್ಯಮಂತ್ರಿಗಳು ಮಾತ್ರ ಜಾಲಿ ಟ್ರಿಪ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.