ಹಾವೇರಿ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ ವತಿಯಿಂದ ಮಹಾರಾಷ್ಟ್ರದ ಪುಣೆ ಮಹಾನಗರದಲ್ಲಿ ಜ.2ರಿಂದ 29ರವರೆಗೆ ನಡೆಯಲಿರುವ ಅಂತಾರಾಜ್ಯ ಯುವ ವಿನಿಮಯ ಸಮ್ಮೇಳನಕ್ಕೆ ಹಾವೇರಿ ಜಿಲ್ಲಾ ಘಟಕದಿಂದ 9 ಯುವಕ- ಯುವತಿಯರನ್ನು ಆಯ್ಕೆ ಮಾಡಲಾಗಿದೆ.
ಗಣೇಶ ರಾಯ್ಕರ, ಪ್ರೀತಿ ರಾಯ್ಕರ, ಹೇಮಗಿರಿ ಅಂಗಡಿ, ಗಜೇಂದ್ರ ಲಮಾಣಿ, ಪೂಜಾ ಗಂಗೋಲಾ, ಪ್ರವೀಣ ಕುಪ್ಪೇಲೂರ, ರಾಘವೇಂದ್ರ ಗಡ್ಡದ, ಸ್ವಾತಿ ಕಳಸೂರ, ಡಾ.ಆನಂದ ಇಂದೂರ ಆಯ್ಕೆಯಾಗಿದ್ದು, ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮೇರಾ ಯುವ ಭಾರತ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.