rakhasa hori 
ಹಾವೇರಿ

ಕೆರಿಮತ್ತಿಹಳ್ಳಿ ಹೋರಿ ರಾಕ್ಷಸ ಇನ್ನಿಲ್ಲ

ಹಾವೇರಿ: ಕಳೆದ ಹನ್ನೊಂದು ವರ್ಷಗಳ ಕಾಲ ಕೊಬ್ಬರಿ ಹೋರಿ ಸ್ಪರ್ಧೆಯ ಕಿಂಗ್ ಎನಿಸಿಕೊಂಡಿದ್ದ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದ ರಾಕ್ಷಸ 220 ಹೆಸರಿನ ಹೋರಿ ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದೆ.
ನೆಚ್ಚಿನ ಹೋರಿ ಸಾವಿಗೆ ಸಾವಿರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಗ್ರಾಮದ ಸಿದ್ದಲಿಂಗೇಶ ಬಸಪ್ಪ ವಾಲಿ 11 ವರ್ಷಗಳ ಹಿಂದೆ ತಮಿಳುನಾಡಿನಿಂದ 1 ಲಕ್ಷ ರೂ. ಕೊಟ್ಟು ಹೋರಿ ಖರೀದಿಸಿ ಗ್ರಾಮಕ್ಕೆ ಕರೆತಂದಿದ್ದರು. ಹೋರಿ ಗತ್ತು ನೋಡಿ ರಾಕ್ಷಸ 220 ನಾಮಕರಣ ಮಾಡಿದ್ದರು.
ಶಿವಮೊಗ್ಗ, ಹಾವೇರಿ, ಶಿರಸಿ ಭಾಗ ನೂರಾರು ಹೋರಿ ಹಬ್ಬಗಳಲ್ಲಿ ಪಾಲ್ಗೊಂಡು ಅಪಾರ ಅಭಿಮಾನಿಗಳನ್ನು ಈ ಹೋರಿ ಹೊಂದಿತ್ತು. ಕಳೆದ ವಾರ ವಯೋಸಹಜ ಕಾಯಿಲೆಯಿಂದ ಬಳಲಿ ಮೃತಪಟ್ಟಿದೆ. ಕುಟುಂಬಸ್ಥರು, ಗ್ರಾಮಸ್ಥರು, ಅಭಿಮಾನಿಗಳು ಗ್ರಾಮದಲ್ಲಿ ವಿಧಿವಿಧಾನಗಳ ಪ್ರಕಾರ ಅಂತಿಮ ಸಂಸ್ಕಾರ ನೆರವೇರಿಸಿದರು.
"

ಪ್ರತಿ ವರ್ಷ ಹೋರಿ ಜನ್ಮದಿನದಂದು ಗ್ರಾಮದಲ್ಲಿ ರಕ್ತದಾನ ಶಿಬಿರ ಹಾಗೂ ಅನನಸಂತರ್ಪಣೆ ಮಾಡಲಾಗುತ್ತಿತ್ತು. ಈ ಹೋರಿ ಸ್ಪರ್ಧೆಯಲ್ಲಿ 4 ಬೈಕ್, 45 ಗ್ರಾಂ ಚಿನ್ನ, ಅರ್ಧ ಕೆಜಿ ಬೆಳ್ಳಿ, 8 ರೇಫ್ರಿಜರೇಟರ್, 7 ಟ್ರಜರಿ, ಇತರೆ ಬಹುಮಾನಗಳನ್ನು ಗೆದ್ದಿತ್ತು. ಮನೆಯ ಮಗನಂತೆ ನಮ್ಮ ಕುಟುಂಬದವರು ನೋಡಿಕೊಳ್ಳುತ್ತಿದ್ದರು. ನಮ್ಮೆಲ್ಲರ ಪ್ರೀತಿಯ ಹೋರಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.