Haveri, Jain Milan, Minister, D.Sudhakar, Condolence,
ಹಾವೇರಿ: ನಗರದ ಗಾಂಧೀ ವೃತ್ತದಲ್ಲಿ ಸೋಮವಾರ ಭಾರತೀಯ ಜೈನ ಮಿಲನ ಸಂಘ ಹಾಗೂ ಜೈನ ಸಮುದಾಯದ ವತಿಯಿಂದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ.ಸುಧಾಕರ ನಿಧನದ ಹಿನ್ನೆಲೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಗಾಂಧೀ ವೃತ್ತದಲ್ಲಿ ಡಿ.ಸುಧಾಕರ ಅವರ ಭಾವಚಿತ್ರಕ್ಕೆ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಕಾಂಗ್ರೆಸ್ ಮುಖಂಡರಾದ ಪ್ರಭು ಬಿಷ್ಟನಗೌಡ್ರ, ಜೈನ ಮಿಲನ ಸಂಘದ ನಿರ್ದೇಶಕ ಭರತ ಹಜಾರೆ, ಹಾವೇರಿ ಘಟಕದ ಅಧ್ಯಕ್ಷ ನವೀನ ಜಕಶೆಟ್ಟಿ, ಕಾರ್ಯದರ್ಶಿ ಪ್ರಶಾಂತ ಮುರಗಿ, ಮದನಕುಮಾರ ಜೈನ, ವಿಮಲ ಬೋಗಾರೆ, ಚಂದ್ರನಾಥ ಕಳಸೂರ, ಮಹಾವೀರ ಕಳಸೂರ, ಪದ್ಮರಾಜ ಕಳಸೂರ, ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಿ ಕಳಸೂರ, ಸುನಿತಾ ಹಜಾರೆ, ಶಂಕರ ಮೆಹರವಾಡೆ, ಮತ್ತಿತರರು ಪಾಲ್ಗೊಂಡಿದ್ದರು.