Haveri, Ijar lakamapur, Students, PU Result, 
ಹಾವೇರಿ

ಇಜಾರಿಲಕಮಾಪುರದ ಸರ್ಕಾರಿ ಕಾಲೇಜ್ ಬಾಲಕಿಯರ ಸಾಧನೆ

ಹಾವೇರಿ: ನಗರದ ಇಜಾರಿ ಲಕಮಾಪುರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದ ಸುಮಾ ಡೊಳ್ಳಿನ 575 ಅಂಕ ಪಡೆದು ಕಾಲೇಜ್‌ಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದ ಭೂಮಿಕಾ ಬಂಡಿವಡ್ಡರ 564 ಅಂಕದೊಂದಿಗೆ ದ್ವಿತೀಯ, ಕಲಾ ವಿಭಾಗದ ವಿದ್ಯಾ ಕಟ್ಟಿಮನಿ ಹಾಗೂ ಸುಷ್ಮಾ ಬಾವನೂರ ಇಬ್ಬರೂ 563 ಅಂಕ ಪಡೆದು ತೃತಿಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಪ್ರಿಯಾ ಬೊಮ್ಮನಹಳ್ಳಿ (558), ಯಲ್ಲಮ್ಮ ತಳವಾರ (558), ಅಕ್ಷತಾ ಬೊಮ್ಮಣ್ಣನವರ (553), ವಾಣಿಜ್ಯ ವಿಭಾಗದ ಸುಜಾತಾ ಸಿದ್ದನಗೌಡರ (560), ರೇಖಾ ಕಾರಂಜಿ (557), ವಿಜ್ಞಾನ ವಿಭಾಗದ ಅಮೃತಾ ಬಿದರಿಕಟ್ಟಿ (562), ರಮ್ಯಾ ಯಳ್ಳೂರ (558) ಅಂಕ ಪಡೆದಿದ್ದಾರೆ ಎಂದು ಕಾಲೇಜ್‌ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಓದಿಗೆ ಇಂಬು ನೀಡಿದ ವಿದ್ಯಾರ್ಥಿ ಮಿತ್ರ
ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ‘ವಿಜಯವಾಣಿ’ ವಿದ್ಯಾರ್ಥಿ ಮಿತ್ರ ಹೆಚ್ಚು ಸಹಕಾರಿಯಾಗಿತ್ತು. ಕಾಲೇಜ್‌ನಲ್ಲಿ ಉಪನ್ಯಾಸಕರು ಬೋಧಿಸಿದ ಪಾಠದ ಜತೆಗೆ ವಿದ್ಯಾರ್ಥಿ ಮಿತ್ರ ಓದು ಹೆಚ್ಚಿನ ಅಂಕ ಪಡೆಯಲು ಇಂಬು ನೀಡಿತು ಎಂದು ಇಜಾರಿ ಲಕಮಾಪುರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ಗೆ ಪ್ರಥಮ ಸ್ಥಾನ ಪಡೆದಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸುಮಾ ಡೊಳ್ಳಿನ ತಿಳಸಿದರು.