ಹಾವೇರಿ: ರಾಜ್ಯ ಗುಪ್ತವಾರ್ತೆಯ ಪೊಲೀಸ್ ಮಹಾನಿರ್ದೇಶಕ (ಐಜಿಪಿ) ಡಾ.ಚಂದ್ರಗುಪ್ತ ಮಂಗಳವಾರ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಎಲ್ಲ ವಿಭಾಗಗಳ ಪರಿವೀಕ್ಷಣೆ ನಡೆಸಿ ನಂತರ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಪೊಲೀಸ್ ವ್ಯವಸ್ಥೆ ಬಲಪಡಿಸಿ, ಜನರಿಗೆ ಅಭಯ ನೀಡುವಂತೆ ಸಲಹೆ ನೀಡಿದರು. ಬಳಿಕ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ಪರಿವೀಕ್ಷಣಾ ಕವಾಯತಿನ ಗೌರವ ವಂದನೆ ಸ್ವೀಕರಿಸಿ, ಜಿಲ್ಲೆಯ ಪೊಲೀಸ್ ವಾಹನಗಳ ಪರಿವೀಕ್ಷಣೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರಿವೀಕ್ಷಣೆ ನಡೆಸಿದರು. ಎಸ್‌ಪಿ ಯಶೋಧಾ ವಂಟಗೋಡಿ, ಎಎಸ್‌ಪಿ ಲಕ್ಷ್ಮಣ ಶಿರಕೋಳ, ಇತರ ಅಧಿಕಾರಿಗಳು ಇದ್ದರು.