Haveri, Horatti, Birthday, Celebration, At Aged Home,  
ಹಾವೇರಿ

ಹಾವೇರಿ; ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ 80ನೇ ಜನ್ಮದಿನಾಚರಣೆ

ಹಾವೇರಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ 80ನೇ ಜನ್ಮದಿನಾಚರಣೆ ಅಂಗವಾಗಿ ಹಾವೇರಿ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ವತಿಯಿಂದ ಹಾವೇರಿ ನಗರದ ನಾಗೇಂದ್ರಮಟ್ಟಿಯ ಶ್ರೀಶಕ್ತಿ ವೃದ್ದಾಶ್ರಮದ ಸದಸ್ಯರಿಗೆ ಹಣ್ಣುಗಳು, ಔಷಧ ವಿತರಿಸಲಾಯಿತು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆರ್.ಎಚ್.ಬೆಟ್ಟಳ್ಳೇರ, ಕಾರ್ಯದರ್ಶಿ ಎನ್.ಎನ್.ಕುಂದೂರ, ಎಂ.ಎಸ್.ಕೆಂಚನಗೌಡರ, ಎಸ್.ಎಲ್.ಕಾಡದೇವರಮಠ, ಎಂ.ಬಿ.ರಮೇಶ, ಶರಣಪ್ಪ ಇಟಗಿ, ರವಿ ವಿ.ಎಸ್., ಶಿವಬಸವ ಮರಳಿಹಳ್ಳಿ, ರಾಘವೇಂದ್ರ ಬಾಸೂರ, ಡಿ.ಡಿ.ಲಂಗೋಟಿ, ಗಿರೀಶ ಮತ್ತಿಹಳ್ಳಿ, ಉಮೇಶ ಛತ್ರದ, ಮಹಾಂತೇಶ ಮುದಕಪ್ಪನವರ, ಇತರರಿದ್ದರು.