hanuma jayanti 
ಹಾವೇರಿ

ಆಂಜನೇಯನಿಗೆ ತೊಟ್ಟಿಲೋತ್ಸವ; ಹನುಮ ಜಯಂತಿ ಸಡಗರ

ಹಾವೇರಿ: ವಾಲ್ಮೀಕಿ ವೃತ್ತದ ಪಿಡಬ್ಲ್ಯೂಡಿ ಕ್ವಾಟ್ರಸ್‌ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ ನೆರವೇರಿತು. ಬ್ರಾಹ್ಮೀ ಮುಹೂರ್ತದಲ್ಲಿ ಆಂಜನೇಯನಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ಮಾತೆಯರು, ಭಕ್ತರ ಸಮ್ಮುಖದಲ್ಲಿ ಬಾಲ ಹನುಮನಿಗೆ ತೊಟ್ಟಿಕೋತ್ಸವ ಆಚರಿಸಲಾಯಿತು. ನಂತರ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಪ್ರಧಾನ ಅರ್ಚಕ ಗೋವಿಂದಾಚಾರ್ಯ ಅಳಂದೇಕರ ನೇತೃತ್ವದಲ್ಲಿ ಪೂಜೆ ನಡೆಯಿತು. ಪುರೋಹಿತರಾದ ಉದಯ ಕುಲಕರ್ಣಿ, ಅರುಣ ಸಾಗರ, ಶ್ರೀನಿವಾಸ ಬಾವಿಕಟ್ಟಿ, ರಾಮಣ್ಣ ಹೊಸಳ್ಳಿ, ಸಮಿತಿ ಅಧ್ಯಕ್ಷ ಗಣೇಶ ಬಿಷ್ಟಣ್ಣನವರ, ಇತರರಿದ್ದರು.