ಗುತ್ತಲ ಹೊರವಲಯದ ಹಾವನೂರ-ಮೈಲಾರ ರಸ್ತೆಯಲ್ಲಿ ಹಾವೇರಿ ಹಾಗೂ ಗುತ್ತಲ ಪಟ್ಟಣದ ನೀರು ಸರಬರಾಜು ಮುಖ್ಯ ಪೈಪ್‌ಲೈನ್ ಒಡೆದು ನೀರು water loss ನಿಂತಿರುವುದು.  
ಹಾವೇರಿ

ಹಾವೇರಿ-ಗುತ್ತಲ ನೀರಿನ ಪೈಪ್‌ಲೈನ್‌ ಒಡೆದು ನೀರು ಪೋಲು water loss

ಗುತ್ತಲ: ಪಟ್ಟಣದ ಹೊರವಲಯದ ಹಾವನೂರ-ಮೈಲಾರ ರಸ್ತೆಯಲ್ಲಿ ಹಾವೇರಿ ಹಾಗೂ ಗುತ್ತಲ ಪಟ್ಟಣಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ (ಕೆಶಿಪ್) ಕಾಮಗಾರಿ ವೇಳೆ ಒಡೆದ ಪರಿಣಾಮ ಅಪಾರ ಪ್ರಮಾಣದ (water loss) ನೀರು ಪೋಲಾಗಿ, ರಸ್ತೆ ಭಾಗ ಕಳಚಿದ ಘಟನೆ ಮಂಗಳವಾರ ನಡೆದಿದೆ.
ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ನಡೆಸುತ್ತಿದ್ದವರಿಗೆ ನೀರಿನ ಮುಖ್ಯ ಪೈಪ್‌ಲೈನ್ ಇರುವುದು ಗೊತ್ತಿದ್ದರೂ ಹಿಟಾಚಿ ಬಳಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮುಖ್ಯ ಪೈಪ್‌ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಯಿತು. ಗುತ್ತಲ-ಹಾವನೂರ-ಮೈಲಾರ ರಸ್ತೆಯ ಸಂಚಾರಕ್ಕೆ ಕೆಲಕಾಲ ಅಡ್ಡಿಯನ್ನುಂಟು ಮಾಡಿತು.
ನಂತರ ಹಾವೇರಿ ಕುಡಿಯುವ ನೀರಿನ ಸರಬರಾಜನ್ನು ತಕ್ಷಣವೇ ನಿಲ್ಲಿಸಲಾಯಿತು. ಆದರೆ, ನೀರು ಚಿಮ್ಮುವ ರಭಸಕ್ಕೆ ಗುತ್ತಲಕ್ಕೆ ಸರಬರಾಜು ಮಾಡುವ ಪೈಪ್‌ಲೈನ್ ಒಡೆದು ಹೋಯಿತು. ಸುಮಾರು ೬ರಿಂದ ೭ ಅಡಿಯ ಆಳ ಗುಂಡಿ ನಿರ್ಮಾಣವಾಗಿ, ನೀರು ಪಕ್ಕದ ರಸ್ತೆಯ ಅಂಚನ್ನು ಕೊರೆದು ಹಾಳು ಮಾಡಿತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅವರು ಕೆಶಿಪ್ ಕಾಮಗಾರಿ ಗುತ್ತಿಗೆದಾರರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು. ಹಾವೇರಿ ಹಾಗೂ ಗುತ್ತಲ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯತ್ಯಯವಾಗದಂತೆ ಆದಷ್ಟು ಶೀಘ್ರ ದುರಸ್ತಿಗೊಳಿಸಿ, ನೀರು ಸರಬರಾಜು ಆಗುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಟರ್ಬೋ ಇಂಜಿನ್ ದುರಸ್ತಿಗೆ ಸೂಚನೆ: ರಸ್ತೆಯ ಬದಿಯ ಚರಂಡಿ ನೀರು ಜಮೀನುಗಳಿಗೆ ಹರಿದು ತೊಂದರೆಯಾಗುತ್ತಿದೆ. ಗುತ್ತಲಕ್ಕೆ ಸರಬರಾಜು ಮಾಡುವ ಮೂರು ಮುಖ್ಯ ಟರ್ಬೋ ಇಂಜಿನ್ ಸುಟ್ಟು ಹೋಗಿದ್ದರೂ ಇಲ್ಲಿಯವರೆಗೂ ಅವುಗಳ ದುರಸ್ತಿಯನ್ನು ಪಪಂ ಮುಖ್ಯಾಧಿಕಾರಿ ಮಾಡಿಸಿಲ್ಲ. ಈ ಸಮಸ್ಯೆ ಸರಿಪಡಿಸಲು ಸೂಚಿಸುವಂತೆ ಶಾಸಕ ರುದ್ರಪ್ಪ ಲಮಾಣಿಗೆ ಜಿಪಂ ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ ಮನವಿ ಮಾಡಿದರು.
ಆಗ ಸ್ಥಳದಲ್ಲಿ ಪಪಂ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಡಮನಿ ಹಾಗೂ ಕಿರಿಯ ಇಂಜಿನಿಯರ್ ಸುರೇಶ ಚಲವಾದಿ ಅವರಿಗೆ ಎರಡು ದಿನಗಳಲ್ಲಿ ಮೋಟರ್‌ಗಳನ್ನು ದುರಸ್ತಿ ಮಾಡಿಸಿ, ಗುತ್ತಲದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಬೇಕೆಂದು ಸೂಚಿಸಿದರು.