ಹಾವೇರಿ: ತಾಲೂಕಿನ ಕಳ್ಳಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರಾಗಿ ಈರಪ್ಪ ಧ. ಗೋಣೆಪ್ಪನವರ, ಉಪಾಧ್ಯಕ್ಷರಾಗಿ ಸಹನಾ ಉಪಳೆ ಆಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ನೀಲೇಶ ಕನ್ನಪ್ಪನವರ, ಬಸವರಾಜ ಕೂಡ್ಲನವರ, ನಾಗಪ್ಪ ಬಾರ್ಕಿ, ಗೋಣಿಬಸಪ್ಪ ಗೋಣೆಪ್ಪನವರ, ದೇವೇಂದ್ರಗೌಡ ಪಾಟೀಲ, ಬಸನಗೌಡ ಪಾಟೀಲ, ಮಲ್ಲಾರೆಪ್ಪ ಗೋಣೆಪ್ಪನವರ, ರಮೇಶ ನೆಲೋಗಲ್, ನಿರ್ಮಲಾ ಚೌಡಮ್ಮನವರ, ಸಾವಿತ್ರಿ ಹುಣಸಿಮರದ, ನಿರ್ಮಲಾ ಯಲಿಗಾರ, ಸುಧಾ ಗುಡಗೂರ, ರೂಪಾ ಶೆಟ್ಟೆಪ್ಪನವರ, ಸುನಿತಾ ಬಜ್ಜಳ್ಳಿ, ಮಮತಾ ಡೊಳ್ಳಿನ, ಪುಷ್ಪಾ ಕೊಲ್ಲಾಡದ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಬಿಆರ್‌ಸಿ ಎಸ್.ಆರ್.ಹಿರೇಮಠ, ಸಿಆರ್‌ಪಿ ರೇಖಾ ತೋಟಗೇರ, ಶಾಲೆ ಮುಖ್ಯೋಪಾಧ್ಯಾಯೆ ಕೆ.ಎಸ್.ಕಾಟೇನಹಳ್ಳಿ, ಸಿಬ್ಬಂದಿ, ಇತರರಿದ್ದರು.