governor-gehlot-visits-haveri-univercity
ಹಾವೇರಿ: ತಾಲೂಕಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಆವರಣಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸೋಮವಾರ ಮೊದಲ ಬಾರಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಗರದ ಜಿಎಚ್ ಕಾಲೇಜ್ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಹಾವೇರಿ ವಿವಿ ಮೊದಲ ಘಟಿಕೋತ್ಸವ ನಂತರ ವಿವಿ ಕ್ಯಾಂಪಸ್‌ಗೆ ಆಗಮಿಸಿದ ರಾಜ್ಯಪಾಲರು, ಆವರಣದಲ್ಲಿ ನಿರ್ಮಿಸಿದ್ದ ನೂತನ ಸರಸ್ವತಿ ಮೂರ್ತಿ ಅನಾವರಣ ಮಾಡಿದರು. ನಂತರ ಮೊದಲ ಮಹಡಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸುತ್ತಿರುವ ನೂತನ ಸೆಮಿನಾರ್ ಹಾಲ್‌ನ ಅಡಿಗಲ್ಲು ಉದ್ಘಾಟಿಸಿದರು. ಬಳಿಕ ಕ್ಯಾಂಪಸ್ ಆವರಣದಲ್ಲಿ ಆಲದ ಮರದ ಸಸಿ ನೆಟ್ಟು ನೀರುಣಿಸಿದರು.
ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಡಾ.ಅಶೋಕ ಹಿಂಚಿಗೇರಿ, ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ, ಕುಲಸಚಿವರಾದ ಪ್ರೊ.ಎಸ್.ಟಿ.ಬಾಗಲಕೋಟಿ. ಪ್ರೊ.ರೇಣುಕಾ ಮೇಟಿ, ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್‌ಪಿ ಯಶೋಧಾ ವಂಟಗೋಡಿ, ವಿವಿ ಸಿಡಿಸಿ ನಿರ್ದೇಶಕ ರಾಘವೇಂದ್ರ ಫತ್ತೇಪುರ, ಇತರರಿದ್ದರು.