Haveri, Fire, LPG, Leakage, 
ಹಾವೇರಿ

ಎಲ್‌ಪಿಜಿ ಸೋರಿಕೆ, ಮಹಿಳೆಗೆ ಗಾಯ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಇಲ್ಲಿನ ರಾಜೇಂದ್ರ ನಗರದ ಟ್ರಾಫಿಕ್ ಪೊಲೀಸ್ ಸ್ಟೇಶನ್ ಬಳಿಯ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಾಗಿ ಅಗ್ನಿ ಅನಾಹುತ ಸಂಭವಿಸಿ, ಮಹಿಳೆಯೊಬ್ಬರಿಗೆ ಗಾಯಗಳಾಗಿವೆ.
ಮಹಮ್ಮದ್ ಹನೀಫ್ ಕಂಪ್ಲಿ ಎಂಬುವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಬೆಳಗ್ಗೆ ಗ್ಯಾಸ್ ಪೈಪ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರ ಕಾಲಿಗೆ ಸುಟ್ಟಗಾಯಗಳಾಗಿವೆ. ಕುಟುಂಬದವರು ಹಾಗೂ ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಯ ತಿಳಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಬೆಂಕಿ ಅವಘಡದಲ್ಲಿ ರೆಫ್ರಿಜರೇಟರ್, ಡೈನಿಂಗ್ ಟೇಬಲ್, ವಾಷಿಂಗ್ ಮಷಿನ್, ಅಡುಗೆ ಸಾಮಗ್ರಿಗಳು, ಇತರ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಹಾವೇರಿ ಅಗ್ನಿಶಾಮಕ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.