Haveri, DHO, Dengue, Amarness, Programm, 
ಹಾವೇರಿ

ಡೆಂೆ ಕುರಿತು ಜಾಗೃತಿ ಕಾರ್ಯಕ್ರಮ

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಸರ್ವೇಕ್ಷಣ ಘಟಕದಿಂದ ರಾಷ್ಟ್ರೀಯ ಡೆಂೆ ದಿನದ ಅಂಗವಾಗಿ ನಗರದ ಡಾ.ಸಂಜಯ ಡಾಂಗೆ ಪ್ಯಾರಾ ಮೆಡಿಕಲ್ ಕಾಲೇಜ್‌ನಲ್ಲಿ ಇತ್ತೀಚೆಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಎಂಟಮಾಲಜಿಸ್ಟ್ ಶ್ರೀಕಾಂತ ಪಾಟೀಲ ಡೆಂೆ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು.
ಡಾ.ಸಂಜಯ ಡಾಂಗೆ, ಡಾ.ವಸಂತ, ಡಾ.ಶೀತಲ್, ಜಿಲ್ಲಾ ಏಪಿಡಮಿಯಾಲಜಿಸ್ಟ್ ಡಾ.ಪ್ರೇಮಾ, ಆರೋಗ್ಯ ಮೇಲ್ವಿಚಾರಣಾಧಿಕಾರಿ ಕ್ಯೂ.ಎಮ್.ಕೋರಲಹಳ್ಳಿ, ಹಿರಿಯ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿ ಯು.ಪಿ.ಹಿರೇಮಠ, ಚಂದ್ರಶೇಖರ ಹಿತ್ತಲಮನಿ, ಕುಶಾಲ ಕುಂದಗೋಳ, ಇತರರು ಉಪಸ್ಥಿತರಿದ್ದರು.