ಹಾವೇರಿ: ಜಿಲ್ಲೆಯಲ್ಲಿ ಎಲ್.ಪಿ.ಜಿ ಸಿಲಿಂಡರ್‌ಗಳ ಕೊರತೆ ಇಲ್ಲ. ಎಲ್‌ಪಿಜಿ ಸರಬರಾಜಿನ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಭಯ ನೀಡಿದರು.
ಇಲ್ಲಿನ ಹೊರವಲಯದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗೃಹಬಳಕೆ ಸಿಲಿಂಡರ್‌ಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತವು ತೈಲ ಕಂಪನಿಯ ಅಧಿಕಾರಿಗಳೊಂದಿಗೆ (ಐಒಸಿ, ಬಿಪಿಸಿ, ಎಚ್‌ಪಿಸಿ) ಸಭೆ ನಡೆಸಿ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತೈಲ ಕಂಪನಿಯ ಅಧಿಕಾರಿಗಳಿಂದ ಖಾತ್ರಿಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 4,56,725 ಎಲ್‌ಪಿಜಿ ಗ್ರಾಹಕರಿದ್ದು, ಈ ಪೈಕಿ ಐಒಸಿ- 67,837, ಬಿಪಿಸಿ- 37,936 ಎಚ್‌ಪಿಸಿ- 3,50,952 ಗ್ರಾಹಕರಿದ್ದಾರೆ. ದೇಶದಲ್ಲಿ ಪ್ರಸ್ತುತ ಲಭ್ಯವಿರುವ ದೇಶೀಯ ಎಲ್‌ಪಿಜಿ ದಾಸ್ತಾನು ಗೃಹ ಬಳಕೆ ಗ್ರಾಹಕರಿಗೆ ಅಗತ್ಯವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗ್ರಾಹಕರು ಆತಂಕದಲ್ಲಿ ತುರ್ತು ಅನಗತ್ಯ ಬುಕ್ಕಿಂಗ್ ಮಾಡದೇ, ಕೃತಕ ಬೇಡಿಕೆ ಸೃಷ್ಟಿಯಾಗದಂತೆ ಸಮರ್ಪಕವಾಗಿ ಬಳಕೆ ಮಾಡಲು ಹಾಗೂ ಸಮತೋಲನ ಕಾಪಾಡುವಂತೆ ತಿಳಿಸಿದರು.
ಗ್ರಾಹಕರು ಪ್ರತಿ ಗೃಹ ಬಳಕೆಯ ಸಿಲಿಂಡರ್ ಬುಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲಿಂಡರ್‌ಗಾಗಿ ನಗರ ಪ್ರದೇಶದಲ್ಲಿ 25 ದಿನಗಳವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳವರೆಗೆ ಕಂಪನಿ ಅವಕಾಶ ನೀಡಿರುತ್ತದೆ ಎಂದರು.
ಪ್ರಸ್ತುತ ಕೊಲ್ಲಿ ರಾಷ್ಟ್ರಗಳ ಯುದ್ಧದ ಪರಿಣಾಮವಾಗಿ ಉದ್ಭವಿಸಿರುವ ಎಲ್‌ಪಿಜಿ ಸರಬರಾಜು ಬಗ್ಗೆ ಸಮರ್ಪಕವಾಗಿ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಕ್ರಮಗಳನ್ನು ಕೈಗೊಂಡಿರುತ್ತದೆ. ಗ್ರಾಹಕರಿಗೆ ಏಜೆನ್ಸಿಯಲ್ಲಿ ನೇರವಾಗಿ ಬುಕ್ಕಿಂಗ್ ಮಾಡಲು ಅವಕಾಶವಿರುವುದಿಲ್ಲ. ಪರ್ಯಾಯವಾಗಿ ಗ್ಯಾಸ್ ಏಜೆನ್ಸಿಗಳಲ್ಲಿ ಗ್ರಾಹಕರು ಈ ಕೆಳಗಿನಂತೆ ಬುಕ್ಕಿಂಗ್ ಮಾಡಬಹುದಾಗಿದೆ.
ಸಾಮಾನ್ಯವಾಗಿ ಮಿಸ್ ಕಾಲ್ ಮೂಲಕ ಬುಕಿಂಗ್ ಮಾಡಲಾಗುತ್ತಿತ್ತು. ಇದಕ್ಕೆ ಪರ್ಯಾಯವಾಗಿ ಆಯಾ ಕಂಪನಿಗಳ ಆ್ಯಪ್, ಕಂಪನಿ ಪೋರ್ಟಲ್, ವಾಟ್ಸ್ ಆ್ಯಪ್, ಐವಿಆರ್‌ಎಸ್, ಎಸ್‌ಎಂಎಸ್ ವೇದಿಕೆಗಳ ಮುಖಾಂತರ ಬುಕಿಂಗ್ ಮಾಡಬಹುದು ಎಂದರು.
ಸಭೆಯಲ್ಲಿ ಆಹಾರ ನಾಗಾರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ., ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಅಧಿಕಾರಿಗಳು, ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರು, ಎಚ್‌ಪಿಸಿ, ಡಿಪಿಸಿ, ಐಡಿಸಿ ಸೇಲ್ಸ್ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು. ಜಿಲ್ಲೆಯ ತಹಸೀಲ್ದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಎಲ್.ಪಿ.ಜಿ ಸಿಲಿಂಡರ್‌ಗಳ ಬಗ್ಗೆ ಸಮಸ್ಯೆ ಕಂಡು ಬಂದಲ್ಲಿ ತಹಸೀಲ್ದಾರ್ ಕಚೇರಿಗಳಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದ್ದು, ಸಮಸ್ಯೆ ಇದ್ದಲ್ಲಿ ದೂರವಾಣಿಗೆ ಕರೆ ಮಾಡಬಹುದಾಗಿದೆ. ಬ್ಯಾಡಗಿ ತಹಸೀಲ್ದಾರ್ ಕಚೇರಿ- 08375-228428, ಹಾನಗಲ್ಲ ತಹಸೀಲ್ದಾರ್ ಕಚೇರಿ-08379-262241, ಹಾವೇರಿ ತಹಸೀಲ್ದಾರ್ ಕಚೇರಿ- 08375-232447, ರಾಣೆಬೆನ್ನೂರ ತಹಸೀಲ್ದಾರ್ ಕಚೇರಿ-08373- 260449, ಹಿರೇಕೆರೂರ ತಹಸೀಲ್ದಾರ್ ಕಚೇರಿ-08376-282231, ಸವಣೂರ ತಹಸೀಲ್ದಾರ್ ಕಚೇರಿ- 08378-241427, ಶಿಗ್ಗಾಂವಿ ತಹಸೀಲ್ದಾರ್ ಕಚೇರಿ-08378-225044 ಹಾಗೂ ರಟ್ಟಿಹಳ್ಳಿ ತಹಸೀಲ್ದಾರ್ ಕಚೇರಿ-08376-200147 ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಆಹಾರ ನೀರಿಕ್ಷಕರನ್ನು ಸಂಪರ್ಕಿಸಬಹುದು ಎಂದು ಡಿಸಿ ತಿಳಿಸಿದ್ದಾರೆ.
ಸಿಲೆಂಡರ್ ವರ್ಗಾಯಿಸುವಂತಿಲ್ಲ
ಗೃಹಬಳಕ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಸಿಲಿಡರ್‌ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲಿಂಡರ್‌ನಿಂದ ಮತ್ತೊಂದು ಸಿಲಿಂಡರ್‌ಗೆ ವರ್ಗಾಯಿಸುವುದು ಅಪರಾಧವಾಗಿರುತ್ತದೆ. ಸಿಲಿಂಡರ್‌ಗಳನ್ನು ಸಾಗಣೆ ಮಾಡುವ ವಾಹನಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿ ತಿಳಿಸಿದರು.
ಮಾಲತೇಶ ಚನ್ನಬಸಪ್ಪ ಮೇಗಳಮನಿ, ಆಹಾರ ನಿರೀಕ್ಷಕರು ಬ್ಯಾಡಗಿ (8310709346), ರಾಧಾ ರಾವಳ, ಆಹಾರ ನಿರೀಕ್ಷಕರು ಬ್ಯಾಡಗಿ (9739507496), ಮಾರುತಿ ಚೋಟಣ್ಣನವರ, ಆಹಾರ ನಿರೀಕ್ಷಕರು ಹಾನಗಲ್ಲ (9448637558), ಎಂ.ಎಫ್ ಬಿಂಗಿ, ಆಹಾರ ನಿರೀಕ್ಷಕರು ಹಾನಗಲ್ಲ (9741820763), ಎ..ಎಸ್ ಪಾಟೀಲ, ಆಹಾರ ಶಿರಸ್ತೇದಾರ ಹಾವೇರಿ (9900331685), ಶಿವರಾಜ ಕಟಗಿ, ಆಹಾರ ನಿರೀಕ್ಷಕರು ಹಾವೇರಿ (9844218717), ಎಸ್.ಆರ್.ಅಪ್ಪಿನಕೊಪ್ಪ, ಆಹಾರ ಶಿರಸ್ತೇದಾರ ಹಿರೇಕೆರೂರ (7975775467), ಚನ್ನಬಸವ ಕಾಯಕದ, ಆಹಾರ ನಿರೀಕ್ಷಕ ಹಿರೇಕೆರೂರ (7795435693), ಯು.ಎನ್ ಸೂರಣಗಿ, ಆಹಾರ ಶಿರಸ್ತೇದಾರ, ರಾಣೆಬೆನ್ನೂರ (9916071835), ಎಂ.ಸಿ ಮೋಟಗಿ ಆಹಾರ ನಿರೀಕ್ಷಕರು ರಾಣೆಬೆನ್ನೂರ (9731767468), ನಟರಾಜ ನಂದಿಹಳ್ಳಿ, ಆಹಾರ ನಿರೀಕ್ಷಕ ರಾಣೆಬೆನ್ನೂರ (8197388997), ಸ್ಟಿವನ್ ಅಂಗಡಿ, ಆಹಾರ ನಿರೀಕ್ಷಕ ರಾಣೆಬೆನ್ನೂರ (9620019132), ಡಿ.ಎಂ.ಪಾಟೀಲ, ಆಹಾರ ನಿರೀಕ್ಷಕ ಸವಣೂರ (9986786466), ಶಾಂತಕುಮಾರ ಯತ್ನಳ್ಳಿ, ಆಹಾರ ನಿರೀಕ್ಷಕ ಶಿಗ್ಗಾಂವಿ (9448267693), ಚಂದ್ರಶೇಖರ ಹೆದ್ದಳ್ಳಿ, ಆಹಾರ ನಿರೀಕ್ಷಕ ರಟ್ಟಿಹಳ್ಳಿ (9901791444) ಹಾಗೂ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ದೂರವಾಣಿ ಸಂಖ್ಯೆ 08375-249077 ಸಂಪರ್ಕಿಸಬಹುದು.