pavitragouda-lawyer-balan 
ಹಾವೇರಿ

ಪವಿತ್ರಗೌಡಗೆ ಇನ್ನೂ ಒಂದು ವರ್ಷ ಜಾಮೀನು ಕಷ್ಟ; ಪವಿತ್ರಗೌಡ ಪರ ವಕೀಲ ಎಸ್.ಬಾಲನ್

ಹಾವೇರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟಿ ಪವಿತ್ರಗೌಡಗೆ ಇನ್ನೂ ಒಂದು ಜಾಮೀನು ಸಿಗುವ ಸಾಧ್ಯತೆ ಇಲ್ಲ ಎಂದು ಪವಿತ್ರಗೌಡ ಪರ ವಕೀಲ ಎಸ್.ಬಾಲನ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪೊಲೀಸರು ಬಹಳಷ್ಟು ಕಿತಾಪತಿ ಮಾಡಿದ್ದಾರೆ. 2 ವಾಹನದಲ್ಲಿ ಮಹಿಳೆಯರ ಕೂದಲು ವಶಕ್ಕೆ ಪಡೆದಿದ್ದಾರಂತೆ. ಇದು ಪವಿತ್ರಗೌಡ ಅವರದ್ದು ಎನ್ನುತ್ತಾರೆ. ಎಫ್‌ಎಸ್‌ಎಲ್‌ನಲ್ಲಿ ಮಹಿಳೆಯ ಕೂದಲು ಎಂದು ಬಂದಿದೆ. ಈ ಕೇಸ್ ಈಗಾಗಲೇ ದಾರಿ ತಪ್ಪಿದೆ. ಅದನ್ನು ದಾರಿಗೆ ತರುತ್ತೇವೆ ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ರದ್ದಾಗಿದೆ. ಇದು ನ್ಯಾಯಾಧೀಶರ ಆದೇಶ. ಜಾಮೀನು ಸಿಗಲು ಕನಿಷ್ಠ ಪಕ್ಷ 1 ವರ್ಷ ಆಗಬಹುದು. ಇಲ್ಲಿ ನಿಜ ಸುಳ್ಳು ಆಗುತ್ತದೆ. ಸುಳ್ಳು ನಿಜ ಆಗುತ್ತದೆ. ಏನು ಮಾಡೋದು ಕಾನೂನು ವ್ಯವಸ್ಥೆ ಇದು. ಪೊಲೀಸರು ಹಾಕುವ ಚಾರ್ಜ್‌ಶೀಟ್ ಸುಳ್ಳು ಎಂಬುದು ನನ್ನ ಅಭಿಪ್ರಾಯ. ನ್ಯಾಯಾಧೀಶರ ಮೇಲೆ ನಮಗೆ ನಂಬಿಕೆಯಿದೆ. ಅವರು ಆದೇಶ ಮಾಡುತ್ತಾರೆ ಎಂದರು.