Haveri, CMC, BJP, Manavi, Shyama Prasad Mukharji Statue,
ಹಾವೇರಿ: ಕೇಂದ್ರ ಕೈಗಾರಿಕಾ ಹಾಗೂ ಸರಬರಾಜು ಇಲಾಖೆಯ ಮಾಜಿ ಸಚಿವರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಪುತ್ಥಳಿಯನ್ನು ಹಾವೇರಿ ನಗರದಲ್ಲಿ ಸ್ಥಾಪಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಇತ್ತೀಚೆಗೆ ಹಾವೇರಿ ನಗರಸಭೆ ಪೌರಾಯುಕ್ತ ಎಚ್.ಕಾಂತರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಡಾ.ಶ್ಯಾಮಪ್ರಸಾದ ಮುಖರ್ಜಿ ಇವರ ಪುತ್ಥಳಿಯನ್ನು ಪಿ.ಡಬ್ಲ್ಯು.ಡಿ ಕ್ವಾರ್ಟರ್ಸ್, ತಹಸೀಲ್ದಾರ್ ಮನೆ ಕ್ರಾಸ್, ವಿದ್ಯಾನಗರ ಅಥವಾ ಕೆ.ಎಲ್.ಇ. ಸ್ಕೂಲ್ ಎದುರು, ದೇವಗಿರಿ ರಸ್ತೆ ಅಥವಾ ಜಿ.ಎಚ್. ಕಾಲೇಜ್ ಎಡಭಾಗದಲ್ಲಿರುವ ಹೊಂಡಾ ಬೈಕ್ ಶೋರೂ ಎದುರಿನ ಲಕಮಾಪುರ ಕ್ರಾಸ್, ಹಳೆಯ ಪಿ.ಬಿ. ರಸ್ತೆಯ ಯಾವುದಾದರೂ ಒಂದು ಸ್ಥಳದಲ್ಲಿ ಪುತ್ಥಳಿಯನ್ನು ಪ್ರತಿಸ್ಥಾಪನೆ ಮಾಡಿ. ಈ ಕುರಿತು ನಗರಸಭೆಯಿಂದ ಅನುಮತಿ ದೊರಕಿಸಿಕೊಡಿ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.
ಮುಖರ್ಜಿ ಅವರು ಅಖಂಡ ಭಾರತದ ಸ್ಥಾಪನೆಗಾಗಿ ಹಾಗೂ ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಪಡಿಸಲು ಹೋರಾಟ ಮಾಡಿದ್ದರು. ಒಂದೇ ದೇಶದಲ್ಲಿ ಎರಡು ಸಂವಿಧಾನಗಳು ಹಾಗೂ ಎರಡು ಧ್ವಜಗಳು ಒಪ್ಪಲು ಸಾಧ್ಯವಿಲ್ಲ ಎಂದು ಬಲವಾಗಿ ಖಂಡಿಸಿದ್ದರು. ಆ ಹೋರಾಟದ ಮುಖಾಂತರ ಜಮ್ಮು-ಕಾಶ್ಮೀರಕ್ಕೆ ಹೋದಂತ ಸಂದರ್ಭದಲ್ಲಿ ಅವರನ್ನು ಬಂಧನ ಮಾಡಿ ಕಾರಾಗೃಹದಲ್ಲಿ ಇಡಲಾಗಿತ್ತು. ಅವರು ಮುಂದೆ ಅದೇ ಕಾರಾಗೃಹದಲ್ಲಿ ಮರಣ ಹೊಂದಿದರು. ಅದಕ್ಕಾಗಿ ಅವರ ಶ್ಲಾಘನೆಯ ಸೇವೆಯ ಸವಿನೆನಪಿಗಾಗಿ ಮೇಲ್ಕಾಣಿಸಿದ ಸ್ಥಳದಲ್ಲಿ ಪುತ್ಥಳಿ ಪ್ರತಿಸ್ಥಾಪನೆ ಮಾಡಕೊಡಬೇಕು ಆಗ್ರಹಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕಿರಣ ಕೊಳ್ಳಿ, ಪ್ರಮುಖರಾದ ನಾಗೇಂದ್ರ ಕಡಕೋಳ, ನಿರಂಜನ ಹೇರೂರು, ಜಗದೀಶ ಕನವಳ್ಳಿ, ನಾಗರಾಜ ಹರಿಗೋಲ, ಜೈರಾಜ್ ದೇಸಳ್ಳಿ, ಶಿವಯೋಗಿ ಹುಲಿಕಂತಿಮಠ, ಪ್ರಕಾಶ ಉಜನಿಕೊಪ್ಪ, ಲತಾ ಗುಂಡೇನಹಳ್ಳಿ, ಮಂಜುಳಾ ಕರಬಸಮ್ಮನವರ, ಗಿರೀಶ ಶೆಟ್ಟರ, ರೋಹಿಣಿ ಪಾಟೀಲ, ವಿಜಯಲಕ್ಷ್ಮೀ, ಪುಷ್ಪಾ ಚಕ್ರಸಾಲಿ, ಮಹಾಲಿಂಗಸ್ವಾಮಿ ಹಿರೇಮಠ, ವೆಂಕಟೇಶ ಇಟಗಿ, ಸುನೀಲ ಬೇಟಗೇರಿ, ಇತರರು ಪಾಲ್ಗೊಂಡಿದ್ದರು.