Haveri, Bommai, SP Grand Hall, Innaguration,
ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೃಷಿ ಪ್ರಧಾನವಾಗಿರುವ ಹಾವೇರಿ ನಗರ ಹಾಗೂ ಜಿಲ್ಲೆ ಅತಿ ವೇಗವಾಗಿ ಬೇಳೆಯುತ್ತಿದ್ದು, ಈ ನಗರಕ್ಕೆ ಕಿರೀಟ ಪ್ರಾಯವಾಗಿ ಸುಸಜ್ಜಿತವಾಗಿ ಎಸ್‌ಪಿ ಗ್ರಾೃಂಡ್ ಕಲ್ಯಾಣ ಮಂಟಪ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಗುತ್ತಲ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಾಯಿ ಪರಮೇಶ್ವರ ಗ್ರಾೃಂಡ್ (ಎಸ್‌ಪಿ ಗ್ರಾೃಂಡ್) ಕನ್ವೆನ್ಷನ್ ಹಾಲ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಾವೇರಿಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಿರುವ ಪ್ರಕಾಶ ಹಾವೇರಿ ಹಾಗೂ ಬಸಯ್ಯ ಹಿರಿಯಾಳಮಠ ಅವರ ತಂಡದ ಕಾರ್ಯ ಶ್ಲಾಘನೀಯ. ಜಿಲ್ಲೆಯ ಜನರು ಬಹಳ ಸಾಹಸಿಗರು. ಕೃಷಿಯಲ್ಲಿ ಲಾಭ ಮಾಡಿರುವ ರೈತರಿದ್ದಾರೆ. ಹಾವೇರಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಬಂದ ಮೇಲೆ ರಾಣೆಬೆನ್ನೂರ, ಹಿರೇಕೆರೂರ ತಾಲೂಕಿನಲ್ಲಿ ಸುಮಾರು 50 ಸಾವಿರ ಎಕರೆ ಅಭಿವೃದ್ಧಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಕೃಷಿ ಜತೆಗೆ ಇತರ ಉದ್ಯಮಗಳೂ ಬೆಳೆಯುತ್ತಿವೆ. ಅದಕ್ಕಾಗಿ ಇಂತಹ ಕಲ್ಯಾಣ ಮಂಟಪದ ಅಗತ್ಯವಿತ್ತು. ಹಾವೇರಿಗೆ ಇದು ಕಿರೀಟ ಪ್ರಾಯವಾಗಲಿದೆ. ದೊಡ್ಡ ಸಾಧನೆ ಮಾಡಿದ್ದೀರಿ, ನಿಮ್ಮ ಹೆಸರು ನಿಮ್ಮ ಮನೆತನದ ಹೆಸರು ಉಳಿಯುವಂತೆ ಆಗುತ್ತದೆ. ಇದರಿಂದ ಬಹಳಷ್ಟು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಶಿರಹಟ್ಟಿ ಹಾಗೂ ಬಾಲೆಹೊಸೂರಿನ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಬಾಲೆಹೊಸೂರಿನ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿವಿಧ ಮಠಾಧೀಶರು, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಕಲ್ಯಾಣ ಮಂಟಪದ ಮಾಲೀಕರಾದ ಪ್ರಕಾಶ ಹಾವೇರಿ, ಬಸಯ್ಯ ಹಿರಿಯಾಳಮಠ, ಎಸ್.ಆರ್.ಪಾಟೀಲ, ಎಸ್‌ಎಫ್‌ಎನ್ ಗಾಜೀಗೌಡ್ರ, ಸೇರಿದಂತೆ, ಹಲವು ಗಣ್ಯರು ಪಾಲ್ಗೊಂಡಿದ್ದರು.