ಹಾವೇರಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಂಘರ್ಷ ವಿಚಾರ. ಹಾವೇರಿಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೊಸ ಬಾಂಬ್.
ಸಿಎಂ ಬದಲಾವಣೆ ವಿಚಾರವಾಗಿ ಸಿಎಂ ಹಾಗೂ ಡಿಸಿಎಂ ಇಬ್ಬರೂ ನಾಯಕರೂ ಪ್ರತಿಷ್ಠೆಯಾಗಿ ಕೈಗೆತ್ತಿಕೊಂಡಿದ್ದಾರೆ.
ಯಾರೂ ಕೂಡ ಹಿಂದೆ ಸರಿಯಲ್ಲ ಎಂಬ ಸಂದರ್ಭದಲ್ಲಿದ್ದಾರೆ. ಮುಂದೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು.
ಕೇಂದ್ರದ ನಾಯಕರು ಗೊಂದಲ ನಿವಾರಣೆಗಾಗಿ 2, 3 ಸೂತ್ರಗಳನ್ನು ಬಿಟ್ಟಿದ್ದಾರೆ. ಇಬ್ಬರೂ ನಾಯಕರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಇಬ್ಬರನ್ನೂ ಬಿಟ್ಟು 3ನೇ ಸೂತ್ರ ತಯಾರಾಗುವ ಸಾಧ್ಯತೆ ಇದೆ.
3 ನೇ ಸೂತ್ರದ ಬಗ್ಗೆ ಈಗಾಗಲೇ ನನಗೆ ತಿಳಿದು ಬಂದಿದೆ. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು.
ಈ 2 ಕುದುರೆ ಜತೆಗೆ ಇನ್ನೊಂದು ಕುದುರೆ ರೇಸ್ ಗೆ ಬಂದರೂ ಅಚ್ಚರಿಯಿಲ್ಲ. ಆ ಕುದುರೆ ಬಗ್ಗೆ ಹೀಗಾಗಲೇ ಕೇಂದ್ರದಲ್ಲಿ ಚರ್ಚೆಗೆ ಬಿದ್ದಿದೆ. ಆ ಕುದುರೆ ಡಾರ್ಕ್ ಹಾರ್ಸ್ ಇದ್ದಂತೆ ಎಂದರು.
ಪೋಟೋದಲ್ಲಿ 4-5 ಕುದುರೆ ಕಾಣ್ತಿರಬಹುದು ಅವು ಓಡೋದಿಲ್ಲ. ಅವಿಶ್ವಾಸ ನಿರ್ಣಯ ಸಂಧರ್ಭ ಬಂದರೂ ಅಚ್ಚರಿಯಿಲ್ಲ.
ಕುದುರೆ ವ್ಯಾಪಾರವನ್ನು ಕಾಂಗ್ರೆಸ್ 1986 ರಿಂದಲೇ ಪ್ರಾರಂಭ ಮಾಡಿದ್ದಾರೆ. ಮಹಾರಾಷ್ಟ್ರದ ಶಾಸಕರನ್ನು ಇದೇ ಡಿಕೆಶಿ ಇಟ್ಟುಕೊಂಡಿದ್ದು ಮರೆತು ಬಿಟ್ಟರಾ ಎಂದರು ಬೊಮ್ಮಾಯಿ.