Haveri, BJP Offie, Ambedkar, Birthday, 
ಹಾವೇರಿ

ಶೋಷಿತರ ಆಶಾಕಿರಣ ಡಾ.ಬಿ.ಆರ್.ಅಂಬೇಡ್ಕರ್ ; ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಅಧ್ಯಕ್ಷ ಚಂದ್ರಣ್ಣ ಹರಿಜನ

ಹಾವೇರಿ: ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ಸಮಾಜ ಸುಧಾರಕರು, ರಾಜಕೀಯ ಮುತ್ಸದ್ದಿ, ಸಮಾನತೆಗೆ ಹೋರಾಡಿದ ಧೀಮಂತ ನಾಯಕರು. ಶೋಷಿತರು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಶೋಷಿತರ ಆಶಾಕಿರಣವಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಅಧ್ಯಕ್ಷ ಚಂದ್ರಣ್ಣ ಹರಿಜನ ತಿಳಿಸಿದರು.
ನಗರದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 14 ಏಪ್ರಿಲ್ 1891ರಲ್ಲಿ ಮಧ್ಯಪ್ರದೇಶದ ಮಾವು ಎಂಬ ಗ್ರಾಮದಲ್ಲಿ ಜನಿಸಿದ ಅಂಬೇಡ್ಕರ್ ತುಳಿತಕ್ಕೆ ಒಳಗಾದವರಿಗೆ ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಿ ಎಂಬ ಮಂತ್ರ ನೀಡಿದರು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಅಂಬೇಡ್ಕರ್ ಅವರು ಬಾಲ್ಯ ಜೀವನದಲ್ಲಿ ಶಾಲೆಗೆ ಹೋಗುವ ಸಂದರ್ಭದಲ್ಲಿ ಮೇಲ್ ಜಾತಿಯವರ ಶೋಷಣೆಗೆ ಒಳಪಟ್ಟರು. ಮುಂದೆ ಸಂವಿಧಾನವನ್ನು ರಚಿಸಿ ಸಂವಿಧಾನ ಶಿಲ್ಪಿ ಎನಿಸಿಕೊಂಡರು. ಅವರು ದೂರದೃಷ್ಠಿವುಳ್ಳ ಮಹಾನ್ ರಾಜಕೀಯ ಮುತ್ಸದ್ದಿ ಎಂದರು.
ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಅಲ್ಲಾಭಕ್ಷ ತಿಮ್ಮಾಪೂರ, ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಲತಾ ಬಡ್ನಿಮಠ, ಕೃಷ್ಣಾ ಲಮಾಣಿ, ರುದ್ರೇಶ ಚಿನ್ನಣ್ಣನವರ, ಕಿರಣ ಕೊಳ್ಳಿ, ಪದಾಧಿಕಾರಿಗಳು, ಕಾರ್ಯಕರ್ತರು, ಇತರರಿದ್ದರು.