Haveri, BJP< BY Vijayendra, Media Bytes, On CM, 
ಹಾವೇರಿ

ಡೈಲಾಗ್ ಕಿಂಗ್ ಡಿ.ಕೆ.ಶಿವಕುಮಾರ; ಬಿಡದಿ ಟೌನ್‌ಶಿಪ್ ಕುರಿತು ಬಿ.ವೈ.ವಿಜಯೇಂದ್ರ ಲೇವಡಿ

ಹಾವೇರಿ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಡೈಲಾಗ್ ಕಿಂಗ್. ಇವರು ಕೇವಲ ಡೈಲಾಗ್ ಹೊಡೆಯುವುದನ್ನು ಬಿಟ್ಟು ರೈತರಿಗೆ ಸ್ಪಂದಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿಯ ಫಲವತ್ತಾದ ಭೂಮಿ ಕಿತ್ತುಕೊಳ್ಳಲು ಹೊರಟ್ಟಿದ್ದೀರಿ. ಆ ದೇವರು ಕೂಡ ನಿಮ್ಮನ್ನು ಕ್ಷಮಿಸಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸು ಬಿಡದಿ ಯೋಜನೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿವೈವಿ, ನಾವು ರೈತರಿಂದ ಒತ್ತಾಯವಾಗಿ ಜಮೀನು ತೆಗೆದುಕೊಳ್ಳುವುದಿಲ್ಲ ಎಂದು ಅವತ್ತು ನಮ್ಮ ನಾಯಕರು ರೈತರಿಗೆ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈಗ ಯಾವಾಗ ನಮ್ಮ ಮನೆಗೆ ಗೂಂಡಾಗಳು ಬರುತ್ತಾರೆ ? ನಾವು ಏನು ಮಾಡುವುದು ? ಎಂದು ಬಿಡದಿಯ ರೈತರು ಆತಂಕ ವ್ಯಕ್ತಪಡಸುತ್ತಿದ್ದಾರೆ. ರೈತರ ರಕ್ಷಣೆಗೆ ರಾಜ್ಯದ ಮುಖ್ಯಮಂತ್ರಿಗಳು ಬರಬೇಕು ಎಂದು ಆಗ್ರಹಿಸಿದರು.
ಪೊರಕೆ ಹಿಡಿದು ಸಿಎಂ ಮನೆಗೆ ಬರ್ತಾರೆ ಜನ ?
ರೈತರು ಹೇಗೆ ಪೊರಕೆ ಹಿಡಿದು ಅಧಿಕಾರಿಗಳನ್ನು ಓಡಿಸಿದರೋ, ಅದೇ ರೀತಿ ಸಿಎಂ ಮನೆಗೆ ರೈತರು ಪೊರಕೆ ಹಿಡಿದು ಹೋಗುವ ಸ್ಥತಿ ನಿರ್ಮಾಣವಾಗುತ್ತದೆ. ಮೂರು ಜನರು ಸಮಿತಿ ರಚಿಸಿ ನಾಟಕ ಆಡುತ್ತಿದ್ದೀರಿ. ಬಿಡದಿ ವಿಚಾರ ಕೈಬಿಟ್ಟರೆ ನಿಮಗೂ ಒಳ್ಳೆಯ ಶ್ರೇಯಸ್ಸು ಬರುತ್ತದೆ ಎಂದು ಬಿವೈವಿ ವಾಗ್ದಾಳಿ ನಡೆಸಿದರು.